Publish Date: Thu, 18 Nov 2021 (09:49 IST)
Updated Date: Thu, 18 Nov 2021 (09:51 IST)
ಜೈಪುರ: ಟೀಂ ಇಂಡಿಯಾ ನೂತನ ಕೋಚ್ ರಾಹುಲ್ ದ್ರಾವಿಡ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಮುನ್ನ ಬ್ಯಾಟಿಂಗ್ ಟೆಕ್ನಿಕ್ ಹೇಳಿಕೊಡುವ ದೃಶ್ಯಗಳು ವೈರಲ್ ಆಗಿದೆ.
ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಅಪ್ಪಿ ತಪ್ಪಿಯೂ ರಿಷಬ್ ಗೆ ಬ್ಯಾಟಿಂಗ್ ಹೇಳಿಕೊಡಬೇಡಿ. ರಿಷಬ್ ಗೆ ಹೇಳಿಕೊಡಲು ಹೋದರೆ ನಿಮಗೇ ಟೆಕ್ನಿಕ್ ಮರೆತು ಹೋಗಬಹುದು ಎಂದು ಕಾಲೆಳೆದಿದ್ದಾರೆ.
ಬೀಡು ಬೀಸಾಗಿ ಬ್ಯಾಟ್ ಬೀಸುವ ರಿಷಬ್ ಪಂತ್ ಗೆ ಯಾವ ಆಂಗಲ್ ಗಳಲ್ಲಿ ಬ್ಯಾಟ್ ಮಾಡಬೇಕೆಂದು ಸ್ವತಃ ದ್ರಾವಿಡ್ ನೆಟ್ಸ್ ನಲ್ಲಿ ತಾವೇ ಬ್ಯಾಟ್ ಹಿಡಿದು ಹೇಳಿಕೊಟ್ಟಿದ್ದಾರೆ. ಈ ಫೋಟೋ ನೋಡಿ ನೆಟ್ಟಿಗರಲ್ಲಿ ಕೆಲವರು ಕೋಚ್ ಎಂದರೆ ಹೀಗಿರಬೇಕು ನೋಡಿ ಎಂದು ಹೊಗಳಿದರೆ ಮತ್ತೆ ಕೆಲವರು ರಿಷಬ್ ರ ಕಾಲೆಳೆದಿದ್ದಾರೆ.