Select Your Language

Notifications

webdunia
webdunia
webdunia
webdunia

ದ್ರಾವಿಡ್ ಫಸ್ಟ್ ಟೈಮ್ ಆಡಲು ಅವಕಾಶ ಕೊಟ್ಟ ಗಳಿಗೆ ನೆನೆಸಿಕೊಂಡ ರೋಹಿತ್ ಶರ್ಮಾ

ದ್ರಾವಿಡ್ ಫಸ್ಟ್ ಟೈಮ್ ಆಡಲು ಅವಕಾಶ ಕೊಟ್ಟ ಗಳಿಗೆ ನೆನೆಸಿಕೊಂಡ ರೋಹಿತ್ ಶರ್ಮಾ
ಜೈಪುರ , ಬುಧವಾರ, 17 ನವೆಂಬರ್ 2021 (10:39 IST)
ಜೈಪುರ: ಟೀಂ ಇಂಡಿಯಾ ನೂತನ ಕೋಚ್ ಆಗಿ ಆಯ್ಕೆಯಾಗಿರುವ ಮಾಜಿ ನಾಯಕ ರಾಹುಲ್ ದ್ರಾವಿಡ್ ಬಗ್ಗೆ ನೂತನ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ.

ದ್ರಾವಿಡ್ ನಾಯಕತ್ವದಲ್ಲಿ 2007 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ರೋಹಿತ್ ಆ ಗಳಿಗೆಯನ್ನು ನಿನ್ನೆ ಸ್ಮರಿಸಿಕೊಂಡರು.

‘2007 ರಲ್ಲಿ ನಾನು ತಂಡಕ್ಕೆ ಆಯ್ಕೆಯಾದೆ. ಅದಕ್ಕೂ ಮೊದಲು ಬೆಂಗಳೂರಿನಲ್ಲಿ ಕ್ಯಾಂಪ್ ನಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ಆಗ ನರ್ವಸ್ ಆಗಿದ್ದೆ. ಅದಾದ ಬಳಿಕ ಅವರ ನಾಯಕತ್ವದಲ್ಲಿ ಮೊದಲ ಬಾರಿಗೆ ಐರ್ಲೆಂಡ್ ನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ನನ್ನ ಬಳಿ ಬಂದ ದ್ರಾವಿಡ್ ಸರ್ ನೀನು ಈ ಪಂದ್ಯದಲ್ಲಿ ಆಡಲಿರುವೆ ಎಂದಾಗ ನಾನು ಈ ನೆಲದ ಮೇಲೇ ಇರಲಿಲ್ಲ. ಅಷ್ಟು ಖುಷಿಯಾಗಿತ್ತು’ ಎಂದು ರೋಹಿತ್ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ ಈಗ ಮತ್ತೆ ರೋಹಿತ್ ನಾಯಕರಾಗಿ ಆಯ್ಕೆಯಾದ ಬಳಿಕ ದ್ರಾವಿಡ್ ಕೋಚ್ ಆಗಿ ಜೊತೆಯಾಗಿ ಕೆಲಸ ಆರಂಭಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ಪಾಲಿಗೆ ಥ್ರೋ ಡೌನ್ ಸ್ಪೆಷಲಿಸ್ಟ್ ಆದ ಕೋಚ್ ದ್ರಾವಿಡ್