Select Your Language

Notifications

webdunia
webdunia
webdunia
webdunia

ಹೊಸ ಕ್ಯಾಪ್ಟನ್, ಹೊಸ ಕೋಚ್: ಟೀಂ ಇಂಡಿಯಾಗೆ ಇಂದಿನಿಂದ ಹೊಸ ಸರಣಿ

ಹೊಸ ಕ್ಯಾಪ್ಟನ್, ಹೊಸ ಕೋಚ್: ಟೀಂ ಇಂಡಿಯಾಗೆ ಇಂದಿನಿಂದ ಹೊಸ ಸರಣಿ
ಜೈಪುರ , ಬುಧವಾರ, 17 ನವೆಂಬರ್ 2021 (08:55 IST)
Photo Courtesy: Google
ಜೈಪುರ: ಟಿ20 ವಿಶ್ವಕಪ್ ಸೋಲಿನ ಬೇಸರದಲ್ಲಿರುವ ಟೀಂ ಇಂಡಿಯಾ ಇಂದಿನಿಂದ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಟಿ20 ಸರಣಿ ಆಡಲಿದೆ.

ಜೈಪುರದಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಕೋಚ್ ಆಗಿ ರಾಹುಲ್ ದ್ರಾವಿಡ್ ಗೆ ಇದು ಮೊದಲ ಸರಣಿ. ಹೀಗಾಗಿ ಹೊಸ ಕೋಚ್, ನಾಯಕನ ನೇತೃತ್ವದಲ್ಲಿ ಟೀಂ ಇಂಡಿಯಾಗೆ ಹೊಸ ಪರೀಕ್ಷೆ ಎದುರಾಗಿದೆ.

ಪ್ರಮುಖರಿಗೆ ವಿಶ್ರಾಂತಿ ನೀಡಿರುವ ಕಾರಣ ಈ ಸರಣಿಯಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ಸಿಗಲಿದೆ. ಅದರಲ್ಲೂ ಯುವ ಆಟಗಾರರನ್ನು ಪಳಗಿಸುವುದರಲ್ಲಿ ದ್ರಾವಿಡ್, ರೋಹಿತ್ ಎತ್ತಿದ ಕೈ. ಜೊತೆಗೆ ತವರಿನ ಅಂಗಣದಲ್ಲಿ ಪ್ರೇಕ್ಷಕರ ಎದುರು ಬಹಳ ತಿಂಗಳುಗಳ ನಂತರ ಆಡುವ ಅನುಭವ. ಹೀಗಾಗಿ ಈ ಸರಣಿ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಚ್ ರಾಹುಲ್ ದ್ರಾವಿಡ್ ಡ್ಯೂಟಿ ಶುರು