Select Your Language

Notifications

webdunia
webdunia
webdunia
webdunia

ಗುರು ದ್ರಾವಿಡ್ ಕಾರ್ಯವೈಖರಿ ವಿವರಿಸಿದ ಕೆಎಲ್ ರಾಹುಲ್

ಗುರು ದ್ರಾವಿಡ್ ಕಾರ್ಯವೈಖರಿ ವಿವರಿಸಿದ ಕೆಎಲ್ ರಾಹುಲ್
ಮುಂಬೈ , ಮಂಗಳವಾರ, 16 ನವೆಂಬರ್ 2021 (10:06 IST)
ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಬಗ್ಗೆ ಕೆಎಲ್ ರಾಹುಲ್ ಮಾತನಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಟಿ20 ಸರಣಿಗೆ ಮುನ್ನ ರಾಹುಲ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಕೂಲ್ ಆಗಿರುವ ನಾಯಕ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೊತೆ ಕೆಲಸ ಮಾಡುವುದೇ ಖುಷಿ ಎಂದಿದ್ದಾರೆ.

ದ್ರಾವಿಡ್ ಗರಡಿಯಲ್ಲಿ ಭಾರತ ಎ ತಂಡದಲ್ಲಿ ಆಡಿ ಅನುಭವವಿರುವ ಕೆಎಲ್ ರಾಹುಲ್ ಅವರನ್ನು ತಮ್ಮ ಗುರು ಎಂದೇ ಪರಿಗಣಿಸುತ್ತಾರೆ. ಹೀಗಾಗಿ ಈಗ ಮತ್ತೆ ದ್ರಾವಿಡ್ ಕೋಚ್‍ ಆಗಿ ಅವರ ಜೊತೆಗೆ ಕೆಲಸ ಮಾಡುವುದು ಅದೃಷ್ಟ ಎಂದಿದ್ದಾರೆ.

‘ದ್ರಾವಿಡ್ ಡ್ರೆಸ್ಸಿಂಗ್ ರೂಂ ವಾತಾವರಣವನ್ನು ಕೂಲ್ ಆಗಿಡುತ್ತಾರೆ. ಎಲ್ಲಾ ಆಟಗಾರರ ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅವರು ನಮಗೆ ಕರ್ನಾಟಕ ತಂಡದಲ್ಲಿದ್ದಾಗಲೇ ಸಾಕಷ್ಟು ಸಹಾಯ ಮಾಡಿದ್ದರು. ಯಾವಾಗಲೂ ತಂಡದ ಬಗ್ಗೆಯೇ ಯೋಚಿಸುತ್ತಾರೆ. ಅವರಿಂದ ಸಾಕಷ್ಟು ಕಲಿಯುವ ಅವಕಾಶವಿದೆ’ ಎಂದು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೂನಲ್ಲಿ ಬಿಯರ್ ಹಾಕಿ ಕುಡಿದ ಆಸ್ಟ್ರೇಲಿಯಾ ಕ್ರಿಕೆಟಿಗರು: ಛೀ..ಅಸಹ್ಯ ಎಂದ ನೆಟ್ಟಿಗರು