Publish Date: Sun, 13 Feb 2022 (09:00 IST)
Updated Date: Sun, 13 Feb 2022 (09:11 IST)
ಬೆಂಗಳೂರು: ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ.
ವಿಶೇಷವೆಂದರೆ ಇದೇ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಜೊತೆಗೆ ಈ ಹಿಂದೆ ಅಶ್ವಿನ್ ಮಂಕಡ್ ಔಟ್ ಮಾಡಿ ವಿವಾದಕ್ಕೀಡಾಗಿದ್ದರು. ಈ ಘಟನೆಯಲ್ಲಿ ಬಟ್ಲರ್-ಅಶ್ವಿನ್ ನಡುವೆ ಕಿತ್ತಾಟವಾಗಿತ್ತು. ಇದೀಗ ಅದೇ ಬಟ್ಲರ್ ಇರುವ ತಂಡವನ್ನು ಅಶ್ವಿನ್ ಕೂಡಿಕೊಂಡಿದ್ದಾರೆ.
ಹೀಗಾಗಿ ಅಶ್ವಿನ್ ಗೆ ಈಗ ಜೋಸ್ ಬಟ್ಲರ್ ಜೊತೆಗೆ ಫ್ರೆಂಡ್ ಶಿಪ್ ಬೆಳೆಸುವ ಅನಿವಾರ್ಯತೆ ಎದುರಾಗಿದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಅಶ್ವಿನ್ ರನ್ನು ಟ್ರೋಲ್ ಮಾಡಿದ್ದಾರೆ.