Select Your Language

Notifications

webdunia
webdunia
webdunia
webdunia

ಐಪಿಎಲ್ ಗಾಗಿ ಏಷ್ಯಾ ಕಪ್ ರದ್ದು ಮಾಡಲು ಬಿಡಲ್ಲ ಎಂದು ಎಚ್ಚರಿಕೆ ನೀಡಿದ ಪಾಕ್

ಐಪಿಎಲ್ ಗಾಗಿ ಏಷ್ಯಾ ಕಪ್ ರದ್ದು ಮಾಡಲು ಬಿಡಲ್ಲ ಎಂದು ಎಚ್ಚರಿಕೆ ನೀಡಿದ ಪಾಕ್
ಮುಂಬೈ , ಗುರುವಾರ, 16 ಏಪ್ರಿಲ್ 2020 (09:30 IST)
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕೂಟ ನಡೆಸಲು ಏಷ್ಯಾ ಕ್ರಿಕೆಟ್ ಕಪ್ ಟೂರ್ನಿ ರದ್ದು ಮಾಡಲ್ಲ ಬಿಡಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ‍್ಯಕ್ಷ ಎಹ್ಸಾನ್ ಮಣಿ ಎಚ್ಚರಿಸಿದ್ದಾರೆ.


ಈ ಬಾರಿ ಏಷ್ಯಾ ಕಪ್ ಕೂಟವನ್ನು ಪಾಕಿಸ್ತಾನ ಆಯೋಜಿಸುತ್ತಿದೆ. ಒಂದು ವೇಳೆ ಐಪಿಎಲ್ ಗಾಗಿ ಏಷ್ಯಾ ಕಪ್ ರದ್ದು ಮಾಡಿದರೆ ಅದು ಪಾಕಿಸ್ತಾನಕ್ಕೆ ನಷ್ಟ ತಂದೊಡ್ಡಲಿದೆ.

ಕೊರೋನಾದಿಂದಾಗಿ ಐಪಿಎಲ್ ಆರಂಭಿಸಲು ಸಾಧ‍್ಯವಾಗುತ್ತಿಲ್ಲ. ಒಂದು ವೇಳೆ ಐಪಿಎಲ್ ರದ್ದಾದರೆ ಬಿಸಿಸಿಐ ಭಾರೀ ನಷ್ಟ ಹೊರಬೇಕಾಗುತ್ತದೆ. ಹೀಗಾಗಿ ಏಷ್ಯಾ ಕಪ್ ರದ್ದು ಮಾಡಿ ಐಪಿಎಲ್ ಆಯೋಜಿಸಬೇಕು ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಪಾಕಿಸ್ತಾನ ಈಗಲೇ ಎಚ್ಚರಿಕೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯನ್ ಕ್ರಿಕೆಟಿಗರ ಬಗ್ಗೆ ಹೇಳಿಕೆ ನೀಡಿ ಟೀಂ ಇಂಡಿಯಾ ದಿಗ್ಗಜರಿಂದ ಟೀಕೆಗೊಳಗಾದ ಮೈಕಲ್ ಕ್ಲಾರ್ಕ್