ಪುರುಷರಿಂದ ಆಗಲಿಲ್ಲ ನೀವಾದ್ರೂ ಭಾರತವನ್ನು ಸೋಲಿಸಿ: ಪಾಕಿಸ್ತಾನ ಮಹಿಳಾ ಕ್ರಿಕೆಟಿಗರಿಗೆ ಮೊಹ್ಸಿನ್ ನಖ್ವಿ ಆರ್ಡರ್

Krishnaveni K
ಶನಿವಾರ, 4 ಅಕ್ಟೋಬರ್ 2025 (12:40 IST)
ಕೊಲಂಬೊ: ವನಿತೆಯರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾಳೆ ಭಾರತ ಮತ್ತು ಪಾಕಿಸ್ತಾನ ಹೈ ವೋಲ್ಟ್ ಕದನ ನಡೆಯಲಿದೆ. ಈ ಪಂದ್ಯಕ್ಕೆ ಮುನ್ನ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ತಮ್ಮ ದೇಶದ ಆಟಗಾರ್ತಿಯರಿಗೆ ಭಾರತವನ್ನು ಹೊಸಕಿ ಹಾಕಿ ಎಂದು ಆರ್ಡರ್ ಕೊಟ್ಟಿದ್ದಾರೆ.

ಇತ್ತೀಚೆಗೆ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಪುರುಷರ ತಂಡ ಭಾರತದ ಎದುರು ಸಂಪೂರ್ಣ ಮಂಡಿಯೂರಿತ್ತು. ಫೈನಲ್ ನಲ್ಲಿ ಭಾರತದ ವಿರುದ್ಧ ಸೋತಿದ್ದು ಮೊಹ್ಸಿನ್ ನಖ್ವಿಗೆ ಸಹಿಸಲಾಗುತ್ತಿಲ್ಲ. ಅದರಲ್ಲೂ ತಮ್ಮಿಂದ ಭಾರತೀಯ ಆಟಗಾರರು ಏಷ್ಯಾ ಕಪ್ ಟ್ರೋಫಿ ಸ್ವೀಕರಿಸದೇ ಇರುವುದು ಅವರಿಗೆ ಅವಮಾನವಾದಂತಾಗಿದೆ.

ಈ ಕಾರಣಕ್ಕೆ ಈಗ ಮಹಿಳೆಯರ ತಂಡಕ್ಕೆ ಆಲ್ ರೌಂಡರ್ ಪ್ರದರ್ಶನ ನೀಡಿ ಭಾರತವನ್ನು ಸೋಲಿಸಿ ಎಂದು ಕರೆಕೊಟ್ಟಿದ್ದಾರೆ. ಆದರೆ ಭಾರತದ ಮಹಿಳೆಯರ ತಂಡವನ್ನೂ ಸೋಲಿಸುವುದು ಮೊಹ್ಸಿನ್ ಹೇಳಿದಷ್ಟು ಸುಲಭವಲ್ಲ.

ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಮಹಿಳೆಯರ ಕ್ರಿಕೆಟ್ ತಂಡ ಸ್ಟ್ರಾಂಗ್ ಟೀಂ. ಸ್ಮೃತಿ ಮಂಧನಾ, ಹರ್ಮನ್ ಪ್ರೀತ್ ರಂತಹ ದಿಗ್ಗಜ ಆಟಗಾರ್ತಿಯರ ಮುಂದೆ ಪಾಕಿಸ್ತಾನ ಗೆಲ್ಲುವುದು ಮೊಹ್ಸಿನ್ ಹೇಳಿದಷ್ಟು ಸುಲಭವಲ್ಲ. ಏಷ್ಯಾ ಕಪ್ ಹೈಡ್ರಾಮಾದ ಬಳಿಕ ಇಂದು ಮಹಿಳೆಯರ ತಂಡ ಮುಖಾಮುಖಿಯಾಗುತ್ತಿದ್ದು ಈ ಪಂದ್ಯವನ್ನು ಎಲ್ಲರೂ ಕುತೂಹಲದಿಂದ ನೋಡುವಂತಾಗಿದೆ. ಕೊಲೊಂಬೋದಲ್ಲಿ ಭಾರತೀಯ ಕಾಲಮಾನ ಪ್ರಕಾರ ನಾಳೆ ಅಪರಾಹ್ನ 3 ಗಂಟೆಗೆ ಪಂದ್ಯ ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

INDW vs PAKW: ಭಾರತ ಮಹಿಳಾ ಕ್ರಿಕೆಟಿಗರೂ ಇಂದು ಪಾಕಿಸ್ತಾನಿಯರ ಕೈ ಕುಲುಕಲ್ಲ

RCB ಕಪ್ ಗೆದ್ದ ರಜತ್ ಪಾಟೀದಾರ್‌ಗೆ ಒಲಿದ ಅದೃಷ್ಟ

IND vs WI: ಖಾಲಿ ಖಾಲಿ ಮೈದಾನದಲ್ಲಿ ಟೀಂ ಇಂಡಿಯಾ ಬ್ಯಾಟಿಗರ ಅಬ್ಬರ

IND vs WI: ದುರ್ಬಲ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಹೊಸ ದಾಖಲೆ

IND vs WI TEST: ಕನ್ನಡಿಗ ರಾಹುಲ್‌ ಅಜೇಯ ಅರ್ಧಶತಕ: ಮೊದಲ ದಿನ ಭಾರತಕ್ಕೆ ಮೇಲುಗೈ

ಮುಂದಿನ ಸುದ್ದಿ
Show comments