ದುಬೈ: ಭಾರತ ಗೆದ್ದಿದ್ದ ಏಷ್ಯಾ ಕಪ್ ಟ್ರೋಫಿಯನ್ನು ಕದ್ದೊಯ್ದಿದ್ದ ಪಾಕಿಸ್ತಾನ ಮೂಲದ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೊನೆಗೂ ಕಪ್ ವಾಪಸ್ ಮಾಡಿದ್ದಾರೆ. ಬಿಸಿಸಿಐ ಎಚ್ಚರಿಕೆಗೆ ಜಗ್ಗಿದ ಮೊಹ್ಸಿನ್ ನಖ್ವಿ ಮೊದಲು ಕ್ಷಮೆ ಕೇಳಿದ್ದು ಬಳಿಕ ಕಪ್ ನ್ನು ಹಿಂದಿರುಗಿಸಿದ್ದಾರೆ.
ಪಾಕಿಸ್ತಾನವನ್ನು ಫೈನಲ್ ನಲ್ಲಿ ಸೋಲಿಸಿದ ಬಳಿಕ ಟೀಂ ಇಂಡಿಯಾ ಪ್ರಶಸ್ತಿ ಸಮಾರಂಭದಲ್ಲಿ ಪಾಕ್ ಮೂಲದ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಪಡೆಯಲು ನಿರಾಕರಿಸಿತು. ಇದರಿಂದ ಸಿಟ್ಟಿಗೆದ್ದ ನಖ್ವಿ ಟ್ರೋಫಿ, ಮೆಡಲ್ ಗಳ ಸಮೇತ ಮೈದಾನದಿಂದ ತೆರಳಿದ್ದರು.
ಎಸಿಸಿ ಸಭೆಯಲ್ಲಿ ಬಿಸಿಸಿಐ ಪ್ರತಿನಿಧಿಗಳು ಟ್ರೋಫಿ ಮರಳಿಸುವಂತೆ ಒತ್ತಡ ಹೇರಿದರೂ ಮೊಹ್ಸಿನ್ ಒಪ್ಪಿರಲಿಲ್ಲ. ಆದರೆ ಇದೀಗ ಬಿಸಿಸಿಐ ಈ ವಿಚಾರದಲ್ಲಿ ಖಡಕ್ ತೀರ್ಮಾನಕ್ಕೆ ಬಂದಿತ್ತು. ಒಂದು ವೇಳೆ ಟ್ರೋಫಿ ಮರಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪಾಕಿಸ್ತಾನ ಜೊತೆ ಕ್ರಿಕೆಟ್ ಆಡುವ ಯಾವ ದೇಶಗಳೊಂದಿಗೂ ಆಡಲ್ಲ ಎಂದು ಎಚ್ಚರಿಕೆ ನೀಡಿತ್ತು.
ಇದರಿಂದ ಬೆದರಿದ ಮೊಹ್ಸಿನ್ ಏಷ್ಯಾ ಕಪ್ ಟ್ರೋಫಿಯನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಿದ್ದಾರೆ. ಬಿಸಿಸಿಐ ಖಡಕ್ ನಿರ್ಧಾರದ ಬೆನ್ನಲ್ಲೇ ಮೊಹ್ಸಿನ್ ದರ್ಪದ ಮಾತುಗಳನ್ನು ಬಿಟ್ಟು ತಣ್ಣಗಾಗಿದ್ದಾರೆ.