Select Your Language

Notifications

webdunia
webdunia
webdunia
webdunia

ಮೊಹ್ಸಿನ್ ನಖ್ವಿ ಹೊಟ್ಟೆ ಕಿಚ್ಚು ಯಾವ ಮಟ್ಟಿಗಿತ್ತು ಎಂದು ಎಸಿಸಿ ಸಭೆಯಲ್ಲೇ ಬಯಲು

Mohsin Naqvi

Krishnaveni K

ದುಬೈ , ಬುಧವಾರ, 1 ಅಕ್ಟೋಬರ್ 2025 (08:45 IST)
ದುಬೈ: ಏಷ್ಯಾ ಕಪ್ ಗೆದ್ದ ಟೀಂ ಇಂಡಿಯಾಕ್ಕೆ ಟ್ರೋಫಿ ಕೊಡದೇ ಸತಾಯಿಸುತ್ತಿರುವ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಹೊಟ್ಟೆ ಕಿಚ್ಚು ಯಾವ ಮಟ್ಟಿಗೆ ಇದೆ ಎನ್ನುವುದು ನಿನ್ನೆ ಎಸಿಸಿ ಸಭೆಯಲ್ಲೇ ಬಯಲಾಗಿದೆ.

ಏಷ್ಯಾ ಕಪ್ ಟ್ರೋಫಿ ಬಳಿಕ ಮೊದಲ ಬಾರಿಗೆ ಎಸಿಸಿ ಸಭೆ ನಡೆಸಿದೆ. ಇದರಲ್ಲಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿ ಬಗ್ಗೆ ಹಲವು ವಿಚಾರ ಮಾತನಾಡಿದ್ದಾರೆ. ಆದರೆ ಗೆದ್ದ ಟೀಂ ಇಂಡಿಯಾಕ್ಕೆ ಅಭಿನಂದಿಸದೇ ತಮ್ಮ ಹೊಟ್ಟೆ ಕಿಚ್ಚು ಬಟಾ ಬಯಲು ಮಾಡಿದರು.

ಕೊನೆಗೆ ಎಸಿಸಿ ಅಧಿಕಾರಿಯೊಬ್ಬರು ಟೀಂ ಇಂಡಿಯಾಕ್ಕೆ ಅಭಿನಂದಿಸುವಂತೆ ಬಲವಂತ ಮಾಡಿದರು. ಬಳಿಕ ಕಾಟಾಚಾರಕ್ಕೆ ಎಂಬಂತೆ ಅಭಿನಂದಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಎಸಿಸಿ ಸಭೆಯಲ್ಲಿ ನಿನ್ನೆ ಮೊಹ್ಸಿನ್ ನಖ್ವಿಗೆ ಬಿಸಿಸಿಐ ಪ್ರತಿನಿಧಿಗಳು ಚೆನ್ನಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತಕ್ಕೆ ಇನ್ನೂ ಟ್ರೋಫಿ ಮತ್ತು ಮೆಡಲ್ ಕೊಡದೇ ಮೊಹ್ಸಿನ್ ಹೊತ್ತೊಯ್ದಿದ್ದರು. ಇದೀಗ ಅದನ್ನು ಹಸ್ತಾಂತರಿಸುವಂತೆ ಬಿಸಿಸಿಐ ಪ್ರತಿನಿಧಿಗಳು ಕೇಳಿದರೂ ಉದ್ಧಟತನ ಮೆರೆದಿದ್ದಾರೆ. ಇದಕ್ಕೆ ಬಿಸಿಸಿಐ ಪ್ರತಿನಿಧಿಗಳು ಇದು ನಿಮ್ಮ ವೈಯಕ್ತಿಕ ಸೊತ್ತಲ್ಲ. ಈ ವಿಚಾರವಾಗಿ ಐಸಿಸಿಗೆ ದೂರು ನೀಡುವುದಾಗಿ ನೇರವಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಟ್ರೋಫಿ ನಿಮ್ಮ ಮನೆ ಸೊತ್ತಲ್ಲ: ಎಸಿಸಿ ಸಭೆಯಲ್ಲಿ ಮೊಹ್ಸಿನ್ ನಖ್ವಿಗೆ ಬೆವರಿಳಿಸಿದ ಬಿಸಿಸಿಐ