Select Your Language

Notifications

webdunia
webdunia
webdunia
webdunia

ತಾಕತ್ತಿದ್ದರೆ ಆಡಿ ತೋರಿಸಿ: ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕುಮಿನ್ಸ್ ಚಾಲೆಂಜ್

Pat Cumins

Krishnaveni K

ಪರ್ತ್ , ಗುರುವಾರ, 21 ನವೆಂಬರ್ 2024 (11:26 IST)
Photo Credit: X
ಪರ್ತ್: ಭಾರತದ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೆ ಮುನನ್ ಆಸೀಸ್ ನಾಯಕ ಪ್ಯಾಟ್ ಕುಮಿನ್ಸ್ ಟೀಂ ಇಂಡಿಯಾಗೆ ಉತ್ತಮವಾಗಿ ಆಡುವಂತೆ ಸವಾಲು ಹಾಕಿದ್ದಾರೆ.
 

ಟೀಂ ಇಂಡಿಯಾಗೆ ಈಗ ಆಸ್ಟ್ರೇಲಿಯಾದಲ್ಲಿ ಎಲ್ಲಾ ಪಂದ್ಯ ಆಡುವ ಒತ್ತಡವಿದೆ. ಈ ಹಿನ್ನಲೆಯಲ್ಲಿ ಪ್ಯಾಟ್ ಕುಮಿನ್ಸ್ ಚೆನ್ನಾಗಿ ಆಡುವಂತೆ ಸವಾಲು ಹಾಕಿದ್ದರೆ. ನಾವು ಈ ಸರಣಿಗೆ ತಯಾರಾಗಿದ್ದೇವೆ. ನಮಗೆ ಯಾವುದೇ ಒತ್ತಡವಿಲ್ಲ ಎಂದಿರುವ ಕುಮಿನ್ಸ್ ಟೀಂ ಇಂಡಿಯಾಗೆ ಈ ಬಾರಿ ಗೆಲ್ಲುವ ಚಾಲೆಂಜ್ ಹಾಕಿದ್ದಾರೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 20214 ರಿಂದಲೂ ಟೀಂ ಇಂಡಿಯಾ ಗೆಲ್ಲುತ್ತಲೇ ಬಂದಿದೆ. ಟೀಂ ಇಂಡಿಯಾ ಈ ಟೆಸ್ಟ್ ಸರಣಿಯಲ್ಲಿ ತವರಿನಲ್ಲಿರಲಿ, ಆಸ್ಟ್ರೇಲಿಯಾದಲ್ಲಿರಲಿ ತನ್ನ ಪ್ರಾಬಲ್ಯ ಸಾಧಿಸುತ್ತಲೇ ಬಂದಿದೆ. ಆದರೆ ಇದೀಗ ಕಳಪೆ ಫಾರ್ಮ್ ನಲ್ಲಿರುವ ಟೀಂ ಇಂಡಿಯಾಗೆ ಗೆಲುವು ಕಷ್ಟವೆಂದೇ ಹೇಳಲಾಗುತ್ತಿದೆ.

ಜೊತೆಗೆ ಮೊದಲ ಪಂದ್ಯದಕ್ಕೆ ನಾಯಕ ರೋಹಿತ್ ಶರ್ಮಾ ಗೈರಾಗಲಿದ್ದಾರೆ. ಜೊತೆಗೆ ಟೀಂ ಇಂಡಿಯಾ ಟಾಪ್ ಬ್ಯಾಟಿಗ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಫಾರ್ಮ್ ನಲ್ಲಿಲ್ಲ. ಶುಬ್ಮನ್ ಗಿಲ್ ಆಡುವುದು ಇನ್ನೂ ಖಚಿತವಾಗಿಲ್ಲ. ಹೀಗಾಗಿ ಟೀಂ ಇಂಡಿಯಾ ಒತ್ತಡದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ನಿವೃತ್ತಿಯ ಒತ್ತಡ: ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡ ಅಜಿತ್ ಅಗರ್ಕರ್