ಪರ್ತ್: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಆಡಲಿರುವ ಟೀಂ ಇಂಡಿಯಾಗೆ ಮೊದಲ ಪಂದ್ಯ ನಡೆಯಲಿರುವ ಪರ್ತ್ ನಲ್ಲಿ ಖೆಡ್ಡಾವನ್ನೇ ತೋಡಲಾಗಿದೆ. ಅದೇನದು ಈ ಸ್ಟೋರಿ ನೋಡಿ.
ಅತ್ತ ನಾಯಕ ರೋಹಿತ್ ಶರ್ಮಾ ಇಲ್ಲ, ಇತ್ತ ಶುಬ್ಮನ್ ಗಿಲ್ ಗಾಯಗೊಂಡು ಹೊರಹೋಗಿರುವುದರಿಂದ ಟೀಂ ಇಂಡಿಯಾ ಬ್ಯಾಟಿಂಗ್ ಗೆ ಹೊಡೆತ ಬಿದ್ದಿದೆ. ಈ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳನ್ನುಗೆಲ್ಲಲೇಬೇಕಾದ ಒತ್ತಡದಲ್ಲಿರುವ ಟೀಂ ಇಂಡಿಯಾವನ್ನು ಕೆಡವಲು ಆಸ್ಟ್ರೇಲಿಯಾ ಸರಿಯಾಗಿಯೇ ಯೋಜನೆ ಹಾಕಿದೆ.
ಮೊದಲ ಟೆಸ್ಟ್ ಪರ್ತ್ ನಲ್ಲಿ ನಡೆಯಲಿದೆ. ಪರ್ತ್ ಮೈದಾನ ಮೊದಲೇ ವೇಗಿಗಳಿಗೆ ನೆರವಾಗುವ ಪಿಚ್. ಇಲ್ಲಿ ಬ್ಯಾಟಿಂಗ್ ಮಾಡುವುದು ಸವಾಲಿನ ಕೆಲಸವೇ. ಇದೀಗ ಮೊದಲ ಟೆಸ್ಟ್ ಪಂದ್ಯಕ್ಕೆ ವೇಗದ ಜೊತೆಗೆ ಬೌನ್ಸ್ ಆಗುವ ಪಿಚ್ ನ್ನು ತಯಾರಿಸಲಾಗುತ್ತಿದೆಯಂತೆ. ಇದು ಟೀಂ ಇಂಡಿಯಾವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಲಿದೆ.
ಸಾಮಾನ್ಯವಾಗಿ ಅತಿಥೇಯ ತಂಡದ ಅನುಕೂಲಕ್ಕೆ ತಕ್ಕಂತೆ ಪಿಚ್ ತಯಾರಿಸಲಾಗುತ್ತದೆ. ಆಸ್ಟ್ರೇಲಿಯಾ ತಂಡ ವೇಗದ ಬೌಲಿಂಗ್ ಗೆ ಹೆಸರು ವಾಸಿ. ಇದೀಗ ಪರ್ತ್ ನಲ್ಲಿ ಅಂತಹದ್ದೇ ಪಿಚ್ ನಿರ್ಮಿಸಲಾಗುತ್ತಿದ್ದು ಟೀಂ ಇಂಡಿಯಾ ಬ್ಯಾಟಿಗರಿಗೆ ವೇಗಿಗಳನ್ನು ಎದುರಿಸುವುದು ಸವಾಲಿನ ಕೆಲಸವಾಗಲಿದೆ.