ಈ ಹಿಂದೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಒಂದು ಪಂದ್ಯಕ್ಕೆ ಗಿಲ್ ಅಲಭ್ಯರಾಗಿದ್ದರು. ಈ ವೇಳೆ ಸ್ವತಃ ವಿರಾಟ್ ಕೊಹ್ಲಿ ಜವಾಬ್ಧಾರಿ ತೆಗೆದುಕೊಂಡು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಮುಂದೆ ಬಂದಿದ್ದರು. ಈ ಪಂದ್ಯದಲ್ಲೂ ಕೊಹ್ಲಿಯೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಬಹುತೇಕ ಫಿಕ್ಸ್ ಆಗಿದೆ.
ಈಗಾಗಲೇ ರೋಹಿತ್ ಶರ್ಮಾ ಕೂಡಾ ಅಲಭ್ಯರಾಗಿರುವುದರಿಂದ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿಯಬಹುದು. ನಾಲ್ಕನೇ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.