Select Your Language

Notifications

webdunia
webdunia
webdunia
webdunia

Virat Kohli: ಅಭ್ಯಾಸ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಹೋದ ಪುಟ್ಟ, ಬಂದ ಪುಟ್ಟ

Virat Kohli
ಪರ್ತ್: ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೆ ಮುನ್ನ ಟೀಂ ಇಂಡಿಯಾ ಆಟಗಾರರು ಪರ್ತ್ ನಲ್ಲಿ ಅಭ್ಯಾಸ ಪಂದ್ಯವಾಡಿದ್ದಾರೆ. ಈ ಪಂದ್ಯದಲ್ಲೂ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಮುಂದುವರಿದಿದೆ.

ಕೊಹ್ಲಿ, ರೋಹಿತ್ ಸೇರಿದಂತೆ ಟಾಪ್ ಆರ್ಡರ್ ಬ್ಯಾಟಿಗರ ವೈಫಲ್ಯದಿಂದಾಗಿ ಟೀಂ ಇಂಡಿಯಾ ಈ ಮೊದಲು ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಸೋತಿತ್ತು. ಹೀಗಾಗಿ ಈಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಅದಕ್ಕಾಗಿ ವಾರ ಮುಂಚಿತವಾಗಿಯೇ ಪರ್ತ್ ಗೆ ತಲುಪಿ ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ಇಂದು ಇಂಡಿಯಾ  ತಂಡದ ವಿರುದ್ಧ ಟೀಂ ಇಂಡಿಯಾ ತಂಡ ಮೂರು ದಿನಗಳ ಅಭ್ಯಾಸ ಪಂದ್ಯವಾಡಲು ಆರಂಭಿಸಿದೆ. ಆದರೆ ಮೊದಲ ಇನಿಂಗ್ಸ್ ನಲ್ಲಿ ಮತ್ತೆ ವಿರಾಟ್ ಕೊಹ್ಲಿ ಮತ್ತದೇ ತಪ್ಪು ಮಾಡಿ ಕೇವಲ 15 ರನ್ ಗೆ ಔಟಾಗಿದ್ದಾರೆ.

ಮತ್ತೊಮ್ಮೆ ಕೊಹ್ಲಿ ಸ್ಲಿಪ್ ಫೀಲ್ಡರ್ ಗೆ ಕ್ಯಾಚಿತ್ತು ನಿರ್ಗಮಿಸಿದ್ದಾರೆ. ಮುಕೇಶ್ ಕುಮಾರ್ ಬೌಲಿಂಗ್ ನಲ್ಲಿ ಕೊಹ್ಲಿ ಔಟಾಗಿದ್ದಾರೆ. ಇನ್ನು ರಿಷಭ್ ಪಂತ್ 19 ಮತ್ತು ಯಶಸ್ವಿ ಜೈಸ್ವಾಲ್ ಕೇವಲ 19 ರನ್ ಗಳಿಸಿ ಔಟಾಗಿದ್ದಾರೆ. ಭಾರತ ಎ ತಂಡದ ವಿರುದ್ಧ ಭಾರತೀಯ ಬೌಲರ್ ಗಳ ಎದುರೇ ಈ ಪರಿಯ ಪ್ರದರ್ಶನವಾದರೆ ಇನ್ನು ಆಸ್ಟ್ರೇಲಿಯಾ ಬೌಲರ್ ಗಳ ಎದುರು ಇವರದ್ದು ಏನು ಕತೆ ಎಂಬ ಪ್ರಶ್ನೆ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Anshul Kamboj: ಕೇರಳ ವಿರುದ್ಧ 10 ಕ್ಕೆ 10 ವಿಕೆಟ್ ಕಬಳಿಸಿದ ಅಂಶುಲ್ ಕಾಂಬೋಜ್ ದಾಖಲೆ