ಭಾರತವನ್ನು ನಮ್ಮ ಮುಂದೆ ಮಂಡಿಯೂರಿಸಿದೆವು ಎಂದು ಬೀಗಿದ ಪಾಕಿಸ್ತಾನ: ಅಸಲಿಗೆ ನಡೆದಿದ್ದೇ ಬೇರೆ

Krishnaveni K
ಗುರುವಾರ, 18 ಸೆಪ್ಟಂಬರ್ 2025 (09:54 IST)
ದುಬೈ: ಯುಎಇ ವಿರುದ್ಧ ಪಂದ್ಯ ನಡೆಯುವ ಮೊದಲು ಹೈಡ್ರಾಮಾ ನಡೆಸಿದ ಪಾಕಿಸ್ತಾನ ಕೊನೆಗೂ ಐಸಿಸಿ ಜೊತೆ ಮಾತುಕತೆ ನಡೆಸಿ 1 ಗಂಟೆ ವಿಳಂಬವಾಗಿ ಪಂದ್ಯಕ್ಕೆ ಆಗಮಿಸಿತು. ಆದರೆ ಇದರ ಬೆನ್ನಲ್ಲೇ ಪಾಕ್ ಪ್ರೇಮಿಗಳು ಸೋಷಿಯಲ್ ಮೀಡಿಯಾದಲ್ಲಿ ನೋಡಿ ನಾವು ಭಾರತವನ್ನು ನಮ್ಮ ಮುಂದೆ ಮಂಡಿಯೂರಿಸಿದೆವು ಎಂದು ಬೀಗುತ್ತಿದ್ದಾರೆ. ಆದರೆ ಅಸಲಿ ಕತೆಯೇ ಬೇರೆ.

ಯುಎಇ ವಿರುದ್ಧ ಆಡಬೇಕೆಂದರೆ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ರನ್ನು ಕಿತ್ತು ಹಾಕಬೇಕು ಎಂದು ಪಾಕಿಸ್ತಾನ ಎರಡು ಬಾರಿ ಐಸಿಸಿಗೆ ಈ ಮೇಲ್ ಮಾಡಿ ಒತ್ತಡ ಹಾಕಿತ್ತು. ಆದರೆ ಅದನ್ನು ಐಸಿಸಿ ತಿರಸ್ಕರಿಸಿತು. ಹೀಗಾಗಿ ನಿನ್ನೆಯ ಯುಎಇ ವಿರುದ್ಧದ ಪಂದ್ಯಕ್ಕೆ ಸಮಯಕ್ಕೆ ಸರಿಯಾಗಿ ಬಾರದೇ ತನ್ನ ಪ್ರತಿಭಟನೆ ಹೊರ ಹಾಕಿತು.

ಕೊನೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಡುವೆ ತುರ್ತು ಸಭೆ ನಡೆದು ಬಳಿಕ ಪಾಕ್ ಆಟಗಾರರು  ಮೈದಾನಕ್ಕೆ ಬಂದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಕೆಲವು ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳು ನೋಡಿ ನಮ್ಮ ಮೊಹ್ಸಿನ್ ನಖ್ವಿ ಭಾರತ ಮತ್ತು ಐಸಿಸಿಯನ್ನು ಏಕಕಾಲಕ್ಕೆ ನಮ್ಮ ಮುಂದೆ ಮಂಡಿಯೂರಿ ಕೂರುವಂತೆ ಮಾಡಿದರು ಎಂದು ಬೀಗಿದ್ದಾರೆ.

ಆದರೆ ಅಸಲಿಗೆ ಅಲ್ಲಿ ನಡೆದಿದ್ದೇ ಬೇರೆ. ಪಾಕಿಸ್ತಾನದ ಬೇಡಿಕೆಯಂತೆ ಮ್ಯಾಚ್ ರೆಫರಿಯನ್ನು ಐಸಿಸಿ ಕಿತ್ತು ಹಾಕಲೂ ಇಲ್ಲ, ಕೂಟವನ್ನೂ ಬಹಿಷ್ಕರಿಸಲಿಲ್ಲ. ಐಸಿಸಿ ಹೇಳಿದಂತೆ ಕೇಳದೇ ಪಾಕಿಸ್ತಾನಕ್ಕೆ ಬೇರೆ ದಾರಿಯೇ ಇರಲಿಲ್ಲ. ಒಂದು ವೇಳೆ ಕೂಟ ಬಹಿಷ್ಕರಿಸಿದ್ದರೆ ನೂರಾರು ಕೋಟಿ ರೂ ನಷ್ಟ ಭರ್ತಿ ಮಾಡಬೇಕಾಗಿತ್ತು. ಅಷ್ಟಕ್ಕೆ ತಕ್ಕ ಬಿಕಾರಿ ಪಾಕಿಸ್ತಾನದ ಬಳಿ ಹಣವಿಲ್ಲ. ಈ ಕಾರಣಕ್ಕೆ ಕೊನೆಯ ಕ್ಷಣದಲ್ಲಿ ಪ್ಯಾಚಪ್ ಮಾಡಿಕೊಂಡು ಮೈದಾನಕ್ಕೆ ಬಂದಿತ್ತು. ಹಾಗಿದ್ದರೂ ಪಾಕಿಸ್ತಾನಿಯರು ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ಕೊಚ್ಚಿ ಕೊಳ್ಳುತ್ತಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಹಿಳಾ ವಿಶ್ವಕಪ್‌ ಕ್ರಿಕೆಟ್‌: ಭಾರತ ವಿರುದ್ಧ ಸೋಲಿನ ಬೆನ್ನಲ್ಲೇ ಪಾಕ್‌ ಆಟಗಾರ್ತಿಗೆ ಮತ್ತೊಂದು ಶಾಕ್‌

Video: ಪುರುಷರ ತಂಡದಂತೇ ಮಹಿಳಾ ಕ್ರಿಕೆಟಿಗರೂ ಪಾಕಿಸ್ತಾನವನ್ನು ಸೋಲಿಸಿದ್ರು ಮೂತಿಯೂ ನೋಡದೇ ಬಂದ್ರು

Video: ಮೈದಾನದಲ್ಲಿ ಸ್ಪ್ರೇ ಮಾಡಿದ ಪಾಕಿಸ್ತಾನ ಆಟಗಾರ್ತಿಯರು, ಪಂದ್ಯ ಸ್ಥಗಿತವಾಗಿದ್ದೇಕೆ ಗೊತ್ತಾ

INDW vs PAKW: ಟಾಸ್ ವೇಳೆ ಭಾರತಕ್ಕೆ ಮೋಸ ಮಾಡಿದ ಪಾಕಿಸ್ತಾನ ನಾಯಕಿ: ವಿಡಿಯೋ ವೈರಲ್

INDWvsPAKW: ಕೈ ಕುಲುಕುವುದು ಬಿಡಿ, ಮುಖವೂ ನೋಡದ ಹರ್ಮನ್ ಪ್ರೀತ್ ಕೌರ್

ಮುಂದಿನ ಸುದ್ದಿ
Show comments