Publish Date: Mon, 18 Feb 2019 (10:34 IST)
Updated Date: Mon, 18 Feb 2019 (10:35 IST)
ಮೊಹಾಲಿ: ಪುಲ್ವಾಮಾ ಉಗ್ರ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವೆ ಎಲ್ಲಾ ರೀತಿಯ ಬಾಂಧವ್ಯ ಹದಗೆಟ್ಟು ಹೋಗಿದ್ದು, ಇದೀಗ ಮೊಹಾಲಿ ಕ್ರಿಕೆಟ್ ಮೈದಾನದಿಂದ ಪಾಕ್ ಕ್ರಿಕೆಟಿಗರ ಭಾವ ಚಿತ್ರ ಕಿತ್ತು ಹಾಕಲಾಗಿದೆ.
ಪಾಕಿಸ್ತಾನದ ಶ್ರೇಷ್ಠ ಕ್ರಿಕೆಟಿಗರಾದ ಇಮ್ರಾನ್ ಖಾನ್, ಶಾಹಿದ್ ಅಫ್ರಿದಿ, ಜಾವೇದ್ ಮಿಯಾಂದಾದ್ ಮುಂತಾದ ಕ್ರಿಕೆಟಿಗರ ಭಾವಚಿತ್ರಗಳು ಮೊಹಾಲಿ ಮೈದಾನದ ಕಾರಿಡಾರ್ ನಲ್ಲಿ ಇದುವರೆಗೆ ರಾರಾಜಿಸುತ್ತಿತ್ತು.
ಆದರೆ ಇದೀಗ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಉಗ್ರರ ದಾಳಿಗೆ ಪ್ರತಿಭಟನಾರ್ಥವಾಗಿ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸಿಬ್ಬಂದಿ ಪಾಕ್ ಆಟಗಾರರ ಭಾವಚಿತ್ರಗಳನ್ನು ಕಿತ್ತು ಹಾಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ