Publish Date: Mon, 18 Feb 2019 (09:46 IST)
Updated Date: Mon, 18 Feb 2019 (09:48 IST)
ನವದೆಹಲಿ: ಪುಲ್ವಾಮಾದಲ್ಲಿ ಉಗ್ರರು ಭಾರತೀಯ ಯೋಧರ ಮೇಲೆ ನಡೆಸಿದ ಪೈಶಾಚಿಕ ಕೃತ್ಯದಿಂದ ಸಿಟ್ಟಿಗೆದ್ದಿರುವ ಭಾರತ ಹಲವು ರೀತಿಯಲ್ಲಿ ಪಾಕ್ ಗೆ ಶಾಕ್ ಕೊಡುತ್ತಿದೆ.
ಇದೀಗ ಕ್ರೀಡಾ ಲೋಕದಲ್ಲೂ ಪಾಕಿಸ್ತಾನಕ್ಕೆ ಭಾರತ ಶಾಕ್ ಕೊಟ್ಟಿದೆ. ದುಬೈಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ನೇರ ಪ್ರಸಾರದ ಹಕ್ಕು ಹೊಂದಿದ್ದ ರಿಲಯನ್ಸ್ ಬ್ರಾಡ್ ಕಾಸ್ಟರ್ ಇದೀಗ ಒಪ್ಪಂದದಿಂದ ಹಿಂದೆ ಸರಿದಿದೆ. ಪುಲ್ವಾಮಾ ದಾಳಿಯ ಹಿನ್ನಲೆಯಲ್ಲಿ ರಿಲಯನ್ಸ್ ಈ ಕ್ರಮಕ್ಕೆ ಮುಂದಾಗಿದೆ.
ಇದರಿಂದಾಗಿ ಪಾಕಿಸ್ತಾನ ಹೊಸ ಬ್ರಾಡ್ ಕಾಸ್ಟರ್ ಕಂಪನಿಯ ಹುಡುಕಾಟದಲ್ಲಿದೆ. ಇಂದು ಹೊಸ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು ಎಂಬ ವಿಶ್ವಾಸದಲ್ಲಿ ಪಾಕ್ ಕ್ರಿಕೆಟ್ ಸಂಸ್ಥೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ