Publish Date: Mon, 18 Feb 2019 (10:09 IST)
Updated Date: Mon, 18 Feb 2019 (10:10 IST)
ಬೆಂಗಳೂರು: ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಪೈಕಿ ಒಬ್ಬರಾಗಿದ್ದ ಮಂಡ್ಯದ ಎಚ್ ಗುರು ಅಂತ್ಯ ಕ್ರಿಯೆಗೆ ಬಂದಿದ್ದಾಗ ನಟ, ರಾಜಕಾರಣಿ ಪ್ರಕಾಶ್ ರೈ ಮೇಲೆ ಹಲ್ಲೆಯಾಗಿತ್ತು.
ಇದರ ಬಗ್ಗೆ ಪ್ರಕಾಶ್ ರೈ ಈ ಹಲ್ಲೆ ಮಾಡಿದ್ದು, ಮೋದಿ ಘೋಷಣೆ ಕೂಗುವ ಬಿಜೆಪಿಯವರು ಎಂದು ದೂರಿದ್ದರು. ಅಲ್ಲದೆ, ಇಡೀ ದೇಶದ ದುಃಖದಲ್ಲಿ ನಾನು ಭಾಗಿಯಾಗದ್ದಾಗ ನನ್ನ ಮೇಲೆ ನಾಚಿಕೆಯಿಲ್ಲದೆ ಹಲ್ಲೆ ಮಾಡಲು ಮುಂದಾದರು ಎಂದಿದ್ದಾರೆ.
ಅಲ್ಲದೆ, ಮಂಡ್ಯದ ಯೋಧನ ಕುಟುಂಬದವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ರೈ ದಾಳಿ ಮಾಡಿದವರು ಮುಸ್ಲಿಂ ಮತಾಂಧರು. ಯೋಧರಿಗೆ ಎಷ್ಟರಮಟ್ಟಿಗೆ ನೆರವಾಗಬಹುದು ಎಂದು ನನಗೆ ಗೊತ್ತಿಲ್ಲ. ಆದರೆ ಅವರ ಕಷ್ಟದಲ್ಲಿ ಸಹಭಾಗಿಯಾಗುತ್ತೇನೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ