ಮುಂಬೈ: ಟೀಂ ಇಂಡಿಯಾ ಆಂತರಿಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿರುವ ಕ್ರಿಕೆಟಿಗ ಸರ್ಫರಾಜ್ ಖಾನ್ ಭವಿಷ್ಯವೇ ಈಗ ಅತಂತ್ರವಾಗಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೆಲ್ಬೊರ್ನ್ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಕೋಚ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ಜೊತೆ ಕಿತ್ತಾಟವಾಗಿತ್ತು. ಗಂಭೀರ್ ಮತ್ತೊಬ್ಬ ಅನುಭವಿಗೆ ನಾಯಕತ್ವಕ್ಕೆ ನೀಡಲು ಸಜ್ಜಾಗಿದ್ದರು ಎಂಬಿತ್ಯಾದಿ ವಿಚಾರಗಳು ಲೀಕ್ ಆಗಿದ್ದವು.
ಇದನ್ನು ಲೀಕ್ ಮಾಡಿದ್ದು ಸರ್ಫರಾಜ್ ಖಾನ್ ಎಂದು ಗಂಭೀರ್ ಬಿಸಿಸಿಐಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ತಂಡದ ಆಂತರಿಕ ವಿಚಾರಗಳನ್ನು ಲೀಕ್ ಮಾಡಿರುವ ಸರ್ಫರಾಜ್ ವಿರುದ್ಧ ಗಂಭೀರ್ ಸಿಟ್ಟಾಗಿದ್ದಾರೆ.
ಹೀಗಾಗಿ ಮುಂದೆ ಗಂಭೀರ್ ಕೋಚ್ ಆಗಿರುವವರೆಗೆ ಸರ್ಫರಾಜ್ ಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ತಂಡದ ಆಂತರಿಕ ವಿಚಾರವನ್ನು ಲೀಕ್ ಮಾಡಿರುವುದನ್ನು ಗಂಭೀರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಇದೇ ವಿಚಾರಕ್ಕೆ ಮುಂದೆ ಅವರನ್ನು ಆಯ್ಕೆಗೆ ಪರಿಗಣಿಸುವುದು ಅನುಮಾನ ಎನ್ನಲಾಗುತ್ತಿದೆ.