ಮುಂಬೈ: ಟೀಂ ಇಂಡಿಯಾ ವಿದೇಶ ಪ್ರವಾಸದ ವೇಳೆ ಪತ್ನಿಯರೇ ಕ್ರಿಕೆಟಿಗರ ಪ್ರದರ್ಶನಕ್ಕೆ ಸಮಸ್ಯೆ ತಂದೊಡ್ಡುತ್ತಿದ್ದಾರಾ? ಇದೀಗ ಬಿಸಿಸಿಐ ಪತ್ನಿಯರ ಪ್ರವಾಸಕ್ಕೆ ನಿರ್ಬಂಧ ವಿಧಿಸಿರುವುದನ್ನು ನೋಡಿದರೆ ಇದು ನಿಜವೆನಿಸುತ್ತಿದೆ.
ಸಾಮಾನ್ಯವಾಗಿ ವಿದೇಶ ಪ್ರವಾಸದ ವೇಳೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮುಂತಾದ ಕ್ರಿಕೆಟಿಗರು ತಮ್ಮ ಪತ್ನಿಯರನ್ನೂ ಜೊತೆಗೇ ಕರೆದೊಯ್ಯುತ್ತಾರೆ. ಅದರಲ್ಲೂ ಕೊಹ್ಲಿಗೆ ತಮ್ಮ ಪತ್ನಿ, ಮಕ್ಕಳನ್ನು ಸಂಭಾಳಿಸುವುದೇ ದೊಡ್ಡ ಟಾಸ್ಕ್.
ಕೊಹ್ಲಿ ಪತ್ನಿ ಕೂಡಾ ಸೆಲೆಬ್ರಿಟಿಯಾಗಿದ್ದು ಮಕ್ಕಳ ಮುಖ ನೋಡಲು ಕ್ಯಾಮರಾ ಕಣ್ಣುಗಳು ಮುಗಿಬೀಳುತ್ತಿವೆ. ಇವರನ್ನೆಲ್ಲಾ ಸಂಬಾಳಿಸಿಕೊಂಡು ಕೊಹ್ಲಿ ಪ್ರತ್ಯೇಕವಾಗಿ ಟ್ರಾವೆಲ್ ಮಾಡುತ್ತಾರೆ. ರೋಹಿತ್ ಶರ್ಮಾ ಕೂಡಾ ಪ್ರತೀ ಬಾರಿ ಪತ್ನಿಯೊಂದಿಗೇ ಪ್ರವಾಸ ಮಾಡುತ್ತಾರೆ. ಬಹುತೇಕ ಕ್ರಿಕೆಟಿಗರದ್ದು ಇದೇ ಕತೆ.
ಆದರೆ ಪತ್ನಿ, ಮಕ್ಕಳ ಕಡೆಗೆ ಗಮನಹರಿಸುವಷ್ಟರಲ್ಲಿ ಕ್ರಿಕೆಟಿಗರು ಕ್ರಿಕೆಟ್ ಕಡೆಗೆ ಗಮನ ಕೊಡಲಾಗುತ್ತಿಲ್ಲ ಎನ್ನುವುದು ಆರೋಪವಾಗಿದೆ. ಬಹುಶಃ ಇದೇ ಕಾರಣಕ್ಕೆ ಕೆಎಲ್ ರಾಹುಲ್ ಪತ್ನಿ ಅಥಿಯಾ ಪತಿಯ ಜೊತೆಗೆ ಪ್ರವಾಸ ಮಾಡುವುದು ಅಪರೂಪ. ಪತ್ನಿಯರು ಜೊತೆಗಿಲ್ಲದೇ ಹೋದರೆ ಕ್ರಿಕೆಟಿಗರು ಜೊತೆಯಾಗಿ ಪ್ರವಾಸ ಮಾಡುತ್ತಾರೆ ಮತ್ತು ಕೇವಲ ತಮ್ಮ ಅಭ್ಯಾಸದ ಕಡೆಗೆ ಮಾತ್ರ ಗಮನ ಕೇಂದ್ರೀಕರಿಸುತ್ತಾರೆ ಎಂಬುದು ಬಿಸಿಸಿಐ ನಿಲುವಾಗಿದೆ. ಇದು ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತದೆ ನೋಡಬೇಕಿದೆ.