Select Your Language

Notifications

webdunia
webdunia
webdunia
webdunia

Mohammed Shami: ಮೊಹಮ್ಮದ್ ಶಮಿ ವೃತ್ತಿ ಜೀವನಕ್ಕೆ ಬಿಸಿಸಿಐನಿಂದಲೇ ಕೊಳ್ಳಿ

Mohammed Shami

Krishnaveni K

ಮುಂಬೈ , ಮಂಗಳವಾರ, 7 ಜನವರಿ 2025 (12:27 IST)
ಮುಂಬೈ: ಟೀಂ ಇಂಡಿಯಾವನ್ನು ಏಕದಿನ ವಿಶ್ವಕಪ್ ಫೈನಲ್ ವರೆಗೆ ತಲುಪಿಸಿದ ಕೀರ್ತಿ ಹೊಂದಿರುವ ವೇಗಿ ಮೊಹಮ್ಮದ್ ಶಮಿ ಕಳೆದ ಒಂದೂವರೆ ವರ್ಷದಿಂದ ಗಾಯದ ನೆಪದಲ್ಲಿ ಎನ್ ಸಿಎನಲ್ಲೇ ಕಾಲ ಕಳೆಯುತ್ತಿದ್ದಾರೆ.

ಇದಕ್ಕೆ ಕಾರಣ ಬಿಸಿಸಿಐ ಎಂದು ಈಗ ಹಲವರು ಕಿಡಿ ಕಾರುತ್ತಿದ್ದಾರೆ. ಮೊಹಮ್ಮದ್ ಶಮಿಯಂತಹ ಸ್ಟಾರ್ ವೇಗಿ ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ತಂಡದ ಭಾಗವಾಗಿರಬೇಕಿತ್ತು. ತಮ್ಮ ಕಾಲಿಗೆ ಶಸ್ತ್ರಚಿಕಿತ್ಸೆಯಾದ ಬಳಿಕ ಚೇತರಿಸಿಕೊಂಡಿದ್ದ ಶಮಿ ಇತ್ತೀಚೆಗೆ ತವರು ಬಂಗಾಳ ಪರ ರಣಜಿ ಟ್ರೋಫಿ ಆಡಿದ್ದರು.

ಆದರೆ ಅದಾದ ಬಳಿಕ ಮತ್ತೆ ಅವರ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಅವರನ್ನು ಆಸೀಸ್ ಸರಣಿಗೆ ಆಯ್ಕೆ ಮಾಡಿರಲಿಲ್ಲ. ಶಮಿ ಕಳೆದ ಒಂದೂವರೆ ವರ್ಷದಿಂದ ಎನ್ ಸಿಎನಲ್ಲಿ ಪುನಶ್ಚೇತನ ಕೆಲಸದಲ್ಲೇ ತೊಡಗಿಸಿಕೊಂಡಿದ್ದಾರೆ. ಅವರು ಇನ್ನೂ ಕ್ರಿಕೆಟ್ ಕಣಕ್ಕೆ ಪೂರ್ಣ ಪ್ರಮಾಣದಲ್ಲಿ ಮರಳಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಕಾಮೆಂಟ್ ಮಾಡಿದ್ದಾರೆ. ಶಮಿ ಕಳೆದ ಒಂದೂವರೆ ವರ್ಷದಿಂದ ಎನ್ ಸಿಎನಲ್ಲೇ ಕಾಲ ಕಳೆಯುತ್ತಿದ್ದಾರೆ. ವೈದ್ಯಕೀಯ ತಂಡ ಅವರ ಜೊತೆಗೆ ಸರಿಯಾಗಿ ಸಂವಹನ ನಡೆಸುತ್ತಿಲ್ಲವೇ? ನಾನಾಗಿದ್ದರೆ ಶಮಿಯಂತಹ ಆಟಗಾರನನ್ನು ಆಸ್ಟ್ರೇಲಿಯಾ ಸರಣಿಗೆ ಕರೆದೊಯ್ಯುತ್ತಿದ್ದೆ. ಅಂತಹ ಪ್ರತಿಭಾವಂತ ಆಟಗಾರು ಇಷ್ಟು ಸುದೀರ್ಘ ಸಮಯದಿಂದ ಹೊರಗಿದ್ದರೂ ಯಾಕೆ ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಶಮಿಯಂತಹ ಆಟಗಾರನ ಬಗ್ಗೆ ಬಿಸಿಸಿಐ ತೋರುತ್ತಿರುವ ಈ ಅನಾದರಣೆ ಎಲ್ಲರ ಕಣ್ಣು ಕೆಂಪಗಾಗಿಸುತ್ತಿದೆ. ಜೊತೆಗೆ ಶಮಿ ಅನುಪಸ್ಥಿತಿಯಲ್ಲಿ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಮೇಲೆ ಇನ್ನಿಲ್ಲದ ಹೊರೆ ಬೀಳುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಮ್, ನೇಮ್ ಬಿಟ್ಟು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ದೇಶೀಯ ಕ್ರಿಕೆಟ್ ಗೆ