ಮುಂಬೈ: ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಪರ್ಸನಲ್ ಸೆಕ್ರೆಟರಿ (ಪಿಎ) ವಿರುದ್ಧ ಬಿಸಿಸಿಐ ಅಧಿಕಾರಿಗಳೇ ಸಿಟ್ಟಾಗಿದ್ದಾರೆ. ಇರಬಾರದ ಜಾಗದಲ್ಲೆಲ್ಲಾ ಇರ್ತಾರೆ ಎಂಬ ಆರೋಪ ಕೇಳಿಬಂದಿದೆ.
ಗೌತಮ್ ಗಂಭೀರ್ ಪಿಎ ಗೌರವ್ ಅರೋರ ಟೀಂ ಇಂಡಿಯಾದಲ್ಲಿ ತಮ್ಮದಲ್ಲದ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಗಂಭೀರ್ ಹೋದಲ್ಲೆಲ್ಲಾ ತಾವೂ ಮೂಗು ತೂರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಮೀಸಲಾದ ಕಾರನ್ನು ಬಳಸುತ್ತಾರೆ. ಆಯ್ಕೆ ಸಮಿತಿ ಜೊತೆ ಗಂಭೀರ್ ಮಾತುಕತೆ ನಡೆಸುವಾಗ ಪಿಎ ಕೂಡಾ ಇರ್ತಾರೆ. ಪಂದ್ಯ ನಡೆಯುವಾಗ ವಿಐಪಿ ಬಾಕ್ಸ್ ನಲ್ಲಿ ಹೋಗಿ ಕುಳಿತಿರುತ್ತಾರೆ. ತಂಡದ ಆಟಗಾರರಿರುವ ಹೋಟೆಲ್ ಕೊಠಡಿಗೆ ನುಗ್ಗುತ್ತಾರೆ. ಅವರಿಂದಾಗಿ ಪ್ರೈವೆಸಿಯೇ ಇಲ್ಲದಂತಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಟೀಂ ಇಂಡಿಯಾ ಆಟಗಾರರಲ್ಲೂ ಅಸಮಾಧಾನಗಳಿವೆ ಎಂದು ಹೇಳಲಾಗಿತ್ತು. ಆಸ್ಟ್ರೇಲಿಯಾ ಸರಣಿಯ ವೇಳೆ ಕೆಲವು ಆಟಗಾರರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಆ ವರದಿಗಳು ಸಾಬೀತಾದಂತಾಗಿದೆ.