Publish Date: Sun, 08 Oct 2023 (09:10 IST)
Updated Date: Sun, 08 Oct 2023 (09:12 IST)
ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ಆರಂಭವಾಗಿ ಮೂರು ದಿನ ಕಳೆದರೂ ಇನ್ನೂ ಯಾವುದೇ ಪಂದ್ಯಕ್ಕೆ ಸ್ಟೇಡಿಯಂ ಭರ್ತಿ ವೀಕ್ಷಕರ ಹಾಜರಾತಿ ಇರಲಿಲ್ಲ.
ಭಾರತದಂತಹ ದೇಶದಲ್ಲಿ ಕ್ರಿಕೆಟ್ ವಿಶ್ವಕಪ್ ಗೆ ಇಷ್ಟೊಂದು ನೀರಸ ಪ್ರತಿಕ್ರಿಯೆ ವಿದೇಶಿಗರನ್ನೂ ಅಚ್ಚರಿಗೊಳಪಡಿಸಿತ್ತು. ಆದರೆ ಇಂದು ಟೀಂ ಇಂಡಿಯಾ ಮೊದಲ ಪಂದ್ಯವಾಡುತ್ತಿದ್ದು, ಮೈದಾನ ಭರ್ತಿಯಾಗಲಿದೆ.
ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಲಿದೆ. ಸಹಜವಾಗಿಯೇ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್ ಆಗಿದೆ. ವಿಶ್ವಕಪ್ ನ ನಿಜವಾದ ಕಳೆ ಇಂದು ಬರಲಿದೆ. ಇಂದಿನ ಪಂದ್ಯಕ್ಕೆ ಸ್ಟೇಡಿಯಂ ಭರ್ತಿಯಾಗಲಿದೆ.