ಹ್ಯಾಂಗ್ ಝೂ: ಚೀನಾದ ಹ್ಯಾಂಗ್ ಝೂನಲ್ಲಿ ನಡೆಯುತ್ತಿದ್ದ 19 ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಇಂದು ತೆರೆ ಬೀಳಲಿದೆ. ಈ ಕೂಟ ಭಾರತದ ಪಾಲಿಗೆ ಸ್ಮರಣೀಯವಾಗಿತ್ತು.
ನಿನ್ನೆಯೇ ಭಾರತೀಯ ಕ್ರೀಡಾಳುಗಳ ಸ್ಪರ್ಧೆಗಳು ಕೊನೆಗೊಂಡಿವೆ. ಈ ಬಾರಿ ಭಾರತ ಹಿಂದೆಂದಿಗಿಂತಲೂ ದಾಖಲೆಯ ಪದಕ ಸಂಪಾದನೆ ಮಾಡಿದೆ. ಇದೇ ಮೊದಲ ಬಾರಿಗೆ 100 ಪದಕಗಳ ಗಡಿ ದಾಟಿದ ಹಿರಿಮೆ ನಮ್ಮ ದೇಶದ್ದು.
ಈ ಏಷ್ಯಾಡ್ ನಲ್ಲಿ ಭಾರತ 28 ಚಿನ್ನ, 38 ರಜತ ಮತ್ತು 41 ಕಂಚಿನ ಪದಕಗಳೊಂದಿಗೆ ಒಟ್ಟು 107 ಪದಕಗಳನ್ನು ಗೆದ್ದುಕೊಂಡಿದೆ. ಎಂದಿನಂತೆ ಕುಸ್ತಿ, ವೈಟ್ ಲಿಫ್ಟಿಂಗ್ ತಾರೆಗಳು ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲವಾದರೂ ಕ್ರಿಕೆಟ್, ಕಬಡ್ಡಿ, ಹಾಕಿ, ಆರ್ಚರಿ, ಶೂಟಿಂಗ್, ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಹೆಚ್ಚು ಪದಕಗಳು ಬಂದವು. ಇದು ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ ಗೆ ಭಾರತದ ಆತ್ಮವಿಶ್ವಾಸ ಹೆಚ್ಚಿಸಲಿದೆ.