ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ಪುರುಷರ ಹಾಕಿಯಲ್ಲಿ ಭಾರತ ತಂಡ ಜಪಾನ್ ನ್ನು ಮಣಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿದೆ.
									
			
			 
 			
 
 			
			                     
							
							
			        							
								
																	ಇದರೊಂದಿಗೆ 2024 ರಲ್ಲಿ ಪ್ಯಾರಿಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕೂಟಕ್ಕೆ ನೇರ ಅರ್ಹತೆ ಪಡೆದಿದೆ. ಇಂದು ಜಪಾನ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ 5-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಚಿನ್ನದ ಪದಕ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
									
										
								
																	ಇದರೊಂದಿಗೆ ಭಾರತ 95 ಪದಕ ಗೆದ್ದಂತಾಗಿದೆ. ನಾಳೆಯೂ ಸೇರಿದಂತೆ ಇನ್ನು 5 ಪದಕ ಗೆದ್ದರೆ ಭಾರತ ತಾನು ಗುರಿ ಇಟ್ಟುಕೊಂಡಿದ್ದ 100 ಪದಕಗಳ ಸಾಧನೆ ತಲುಪಲಿದೆ.