ದುಬೈ: ಏಷ್ಯಾ ಕಪ್ ಟ್ರೋಫಿ ಟೀಂ ಇಂಡಿಯಾಗೆ ವಾಪಸ್ ಕೊಡ್ತೀನಿ. ಆದ್ರೆ ಇದೊಂದು ಷರತ್ತು ಪೂರೈಸಬೇಕು ಎಂದಿದ್ದಾರೆ ಎಸಿಸಿ ಅಧ್ಯಕ್ಷರೂ ಆಗಿರುವ ಪಾಕಿಸ್ತಾನದ ಮೊಹ್ಸಿನ್ ನಖ್ವಿ. ಇವರ ಕೊಬ್ಬು ಎಷ್ಟಿದೆ ನೋಡಿ.
ಯುಎಇನಲ್ಲಿ ನಡೆದಿದ್ದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಟ್ರೋಫಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ಆದರೆ ಪಾಕಿಸ್ತಾನದವರಾದ ಮೊಹ್ಸಿನ್ ರಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿತ್ತು. ಹೀಗಾಗಿ ತನಗೆ ಅವಮಾನವಾಗಿದೆ ಎಂದು ಮೊಹ್ಸಿನ್ ನಖ್ವಿ ಮೈದಾನದಲ್ಲಿ ಟೀಂ ಇಂಡಿಯಾಗೆ ಟ್ರೋಫಿ ಹಸ್ತಾಂತರಿಸದೇ ತಮ್ಮ ಜೊತೆಗೆ ಹೊತ್ತೊಯ್ದಿದ್ದರು.
ಇಷ್ಟು ದಿನವಾಗಿದ್ದರೂ ಬಿಸಿಸಿಐ ಹಲವು ಬಾರಿ ಟ್ರೋಫಿ ನೀಡುವಂತೆ ಹೇಳಿದರೂ ಕೊಟ್ಟಿಲ್ಲ. ಇದೀಗ ಬಿಸಿಸಿಐ ಅಂತಿಮವಾಗಿ ಮೊಹ್ಸಿನ್ ನಖ್ವಿಗೆ ಟ್ರೋಫಿ ಕೊಡದೇ ಇದ್ದರೆ ಐಸಿಸಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದೆ.
ಇದರ ಬೆನ್ನಲ್ಲೇ ಮೊಹ್ಸಿನ್ ನಖ್ವಿ ಬಿಸಿಸಿಐಗೆ ಈಮೇಲ್ ಮೂಲಕ ಟ್ರೋಫಿ ಕೊಡಲು ಸಿದ್ಧ ಆದರೆ ಒಂದು ಷರತ್ತು ಪೂರೈಸಬೇಕು ಎಂದಿದ್ದಾರೆ. ನವಂಬರ್ 10 ರಂದು ಒಂದು ಅಭಿಮಾನಿಗಳು, ಮಾಧ್ಯಮಗಳ ಸಮ್ಮುಖದಲ್ಲಿ ಒಂದು ಸಮಾರಂಭ ಮಾಡೋಣ. ಅಲ್ಲಿಗೆ ಬಿಸಿಸಿಐ ಅಥವಾ ಟೀಂ ಇಂಡಿಯಾ ಆಟಗಾರರು ಬರಲಿ. ಅಂದು ಎಸಿಸಿ ಅಧ್ಯಕ್ಷನಾದ ನನ್ನ ಕೈಯಾರೆ ಟ್ರೋಫಿ ನೀಡುವುದಾಗಿ ಷರತ್ತು ವಿಧಿಸಿದ್ದಾರೆ.