Select Your Language

Notifications

webdunia
webdunia
webdunia
webdunia

ಮೊದಲ ಪಂದ್ಯದಲ್ಲಿ ಫೇಲ್ ಆಗಿದ್ದಕ್ಕೆ ರೋಹಿತ್ ಶರ್ಮಾರದ್ದು ಏನು ಕಮಿಟ್ ಮೆಂಟ್

Rohit Sharma

Krishnaveni K

ಅಡಿಲೇಡ್ , ಬುಧವಾರ, 22 ಅಕ್ಟೋಬರ್ 2025 (09:32 IST)
ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಫೇಲ್ ಆಗಿದ್ದಕ್ಕೆ ರೋಹಿತ್ ಶರ್ಮಾರದ್ದು ಏನು ಕಮಿಟ್ ಮೆಂಟ್ ಗೊತ್ತಾ? ಇದಕ್ಕೆ ನಿನ್ನೆ ನೆಟ್ಸ್ ನಲ್ಲಿ ನಡೆದ ಘಟನೆಯೇ ಸಾಕ್ಷಿ.

ಬಹಳ ದಿನಗಳ ನಂತರ ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲೇ ಫೇಲ್ ಆಗಿದ್ದರು. ರೋಹಿತ್ 8 ರನ್ ಗಳಿಸಿದರೆ ಕೊಹ್ಲಿ ಡಕ್ ಔಟ್ ಆಗಿದ್ದರು. ಈಗಾಗಲೇ ಇಬ್ಬರಿಗೂ ರನ್ ಗಳಿಸಿದರೆ ಮಾತ್ರ ತಂಡದಲ್ಲಿ ಸ್ಥಾನ ಎಂದು ಆಯ್ಕೆಗಾರ ಅಜಿತ್ ಅಗರ್ಕರ್ ಖಡಕ್ ಸಂದೇಶ ರವಾನಿಸಿದ್ದರು.

ಈ ಹಿನ್ನಲೆಯಲ್ಲಿ ಈಗ ಇಬ್ಬರೂ ರನ್ ಗಳಿಸುವ ಒತ್ತಡದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಕೇವಲ 8 ರನ್ ಗೆ ಔಟಾಗಿದ್ದು ರೋಹಿತ್ ಗೆ ನಿರಾಸೆಯಾಗಿತ್ತು. ಹೀಗಾಗಿ ಅವರು ಎರಡನೇ ಪಂದ್ಯದಲ್ಲಿ ಹೇಗಾದರೂ ಸರಿಯೇ ರನ್ ಗಳಿಸಿಯೇ ತೀರುತ್ತೇನೆ ಎಂಬ ಹಠಕ್ಕೆ ಬಿದ್ದವರಂತೆ ಕಾಣುತ್ತಿದ್ದಾರೆ.

ನಿನ್ನೆ ಅಡಿಲೇಡ್ ನಲ್ಲಿ ಭಾರತ ತಂಡದ ಅಭ್ಯಾಸ ನಡೆದಿತ್ತು. ಅಡಿಲೇಡ್ ನಲ್ಲಿ ಮೊದಲ ಅಭ್ಯಾಸಕ್ಕೆ ತಂಡದಲ್ಲಿ ಮೊದಲಿಗರಾಗಿ ನೆಟ್ಸ್ ಗೆ ಬಂದಿದ್ದು ರೋಹಿತ್ ಶರ್ಮಾ. ಮೊದಲಿಗರಾಗಿ ಅಭ್ಯಾಸಕ್ಕೆ ಹಾಜರಾದ ರೋಹಿತ್ ಸಾಕಷ್ಟು ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. 2027 ರ ವಿಶ್ವಕಪ್ ಆಡಲೇಬೇಕು ಎಂದು ಶತಪ್ರಯತ್ನ ನಡೆಸುತ್ತಿರುವ ರೋಹಿತ್ ಈಗ ನಾಯಕತ್ವವೂ ಕಳೆದುಕೊಂಡಿರುವುದು ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಗಾಯದಿಂದ ಚೇತರಿಸಿಕೊಂಡ ಪಂತ್‌ಗೆ ಬಿಸಿಸಿಐ ಹೊಸ ಜವಾಬ್ದಾರಿ