Select Your Language

Notifications

webdunia
webdunia
webdunia
webdunia

ಟ್ರಾವಿಸ್ ಹೆಡ್ ಸುಳ್ಳು ಹೇಳಿದ್ರು: ಗಂಭೀರ ಆರೋಪ ಮಾಡಿದ ಮೊಹಮ್ಮದ್ ಸಿರಾಜ್

Mohammed Siraj

Krishnaveni K

ಅಡಿಲೇಡ್ , ಭಾನುವಾರ, 8 ಡಿಸೆಂಬರ್ 2024 (10:37 IST)
Photo Credit: X
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಮೊಹಮ್ಮದ್ ಸಿರಾಜ್ ಮತ್ತು ಎದುರಾಳಿ ಟ್ರಾವಿಸ್ ಹೆಡ್ ನಡುವಿನ ಆಕ್ರಮಣಕಾರೀ ವರ್ತನೆ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಈಗ ಮೊಹಮ್ಮದ್ ಸಿರಾಜ್ ಓಪನ್ ಆಗಿ ಮಾತನಾಡಿದ್ದಾರೆ.

ಟ್ರಾವಿಸ್ ಹೆಡ್ ವಿಕೆಟ್ ಕಬಳಿಸಿದ ಬಳಿಕ ಮೊಹಮ್ಮದ್ ಸಿರಾಜ್ ಸೆಂಡ್ ಆಫ್ ನೀಡಿದರು ಎಂಬುದು ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಭಾರತದ ಮಾಜಿ ತಾರೆ ಸುನಿಲ್ ಗವಾಸ್ಕರ್ ನೇರವಾಗಿಯೇ ಸಿರಾಜ್ ವರ್ತನೆಯನ್ನು ಟೀಕಿಸಿದ್ದರು. ಟ್ರಾವಿಸ್ 140 ರನ್ ಗಳ ಬೃಹತ್ ಇನಿಂಗ್ಸ್ ಆಡಿ ಔಟಾಗಿದ್ದಾರೆ. ಈ ಸಂದರ್ಭದಲ್ಲಿ ಸಿರಾಜ್ ಅನಗತ್ಯ ಅಗ್ರೆಷನ್ ಬೇಕಿರಲಿಲ್ಲ ಎಂದಿದ್ದರು.

ಆದರೆ ಇಂದು ಸಿರಾಜ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆಯಲ್ಲಿ ತಾವೇ ಟ್ರಾವಿಸ್ ರನ್ನು ಕೆಣಕಿದ್ದು ಎಂಬಂತೆ ಬಿಂಬಿತವಾಗಿರುವುದಕ್ಕೆ ಕಾರಣವನ್ನೂ ಬಯಲು ಮಾಡಿದ್ದಾರೆ. ಇದು ಟ್ರಾವಿಸ್ ಹೆಡ್ ರ ಅಸಲಿ ಮುಖವನ್ನು ಬಯಲು ಮಾಡಿದೆ ಎಂದೇ ಹೇಳಬಹುದು.

‘ಔಟಾದಾಗ ಟ್ರಾವಿಸ್ ಮೊದಲನೆಯವರಾಗಿ ನನಗೆ ನಿಂದಿಸಿದರು. ಆದರೆ ಸಂದರ್ಶನದಲ್ಲಿ ಅವರು ನಾನು ಚೆನ್ನಾಗಿ ಬೌಲ್ ಮಾಡಿದೆ ಎಂದು ಅಭಿನಂದಿಸಿದ್ದೆ ಎಂದು ಸುಳ್ಳು ಹೇಳಿದ್ದಾರೆ. ನೀವು ಟಿವಿ ರಿಪ್ಲೇಗಳಲ್ಲೂ ನೋಡಬಹುದು. ಟ್ರಾವಿಸ್ ನಿಂದಿಸಿದ್ದಕ್ಕೇ ನಾನು ಆ ರೀತಿ ಪ್ರತಿಕ್ರಿಯೆ ನೀಡಿದೆ. ಔಟ್ ಮಾಡಿದಾಗ ಎಲ್ಲರಂತೆ ನಾನೂ ಸಂಭ್ರಮಿಸಿದ್ದೆ. ಆದರೆ ಅವರು ನನ್ನನ್ನು ನಿಂದಿಸಿದ್ದರು. ಅದು ಟಿವಿ ರಿಪ್ಲೇಗಳಲ್ಲೂ ಕಂಡುಬಂದಿದೆ. ನಾನು ಏನೂ ಹೇಳಿರಲಿಲ್ಲ. ನಾನು ಎಲ್ಲರನ್ನೂ ಗೌರವಿಸುತ್ತೇನೆ. ಕ್ರಿಕೆಟ್ ಜಂಟಲ್ ಮ್ಯಾನ್ ಗೇಮ್. ಆದರೆ ನಮಗೆ ಗೌರವ ಕೊಡದ ಮೇಲೆ ನಾವೂ ಆ ರೀತಿ ಪ್ರತಿಕ್ರಿಯಿಸುವುದು ಅನಿವಾರ್ಯವಾಗುತ್ತದೆ’ ಎಂದು ಸಿರಾಜ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಪ್ಟನ್ ಬುಮ್ರಾನನ್ನು ಯಾಕೆ ಚೇಂಜ್ ಮಾಡಿದ್ರಿ, ಅನಿಲ್ ಕುಂಬ್ಳೆ ಸಿಟ್ಟು