ಕೋಲ್ಕತ್ತಾ: ಮಾಜಿ ಪತಿ ಮೊಹಮ್ಮದ್ ಶಮಿ ಜೀವನ ನಿರ್ವಹಣೆಗೆ 4 ಲಕ್ಷ ಕೊಟ್ರೆ ಎಲ್ಲಿ ಸಾಲುತ್ತೆ? ನನಗೆ 10 ಲಕ್ಷ ರೂ. ಕೊಡಬೇಕು ಎಂದು ಮಾಜಿ ಪತ್ನಿ ಹಸೀನ್ ಜಹಾನ್ ಬೇಡಿಕೆಯಿಟ್ಟಿದ್ದಾರೆ.
2014 ರಲ್ಲಿ ಹಸೀನ್ ಜೊತೆ ಮದುವೆಯಾಗಿದ್ದ ಮೊಹಮ್ಮದ್ ಶಮಿ 2018 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಜೀವನಾಂಶ ನೀಡುವಂತೆ ಹಸೀನ್ ಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್ ಶಮಿಗೆ ಪತ್ನಿ ಮತ್ತು ಮಗಳ ಜೀವನ ನಿರ್ವಹಣೆಗೆ ಪ್ರತೀ ತಿಂಗಳು 4 ಲಕ್ಷ ರೂ. ನೀಡುವಂತೆ ಆದೇಶ ನೀಡಿದೆ.
ಹಸೀನ್ ಕೋರ್ಟ್ ಗೆ ತನಗೆ ಜೀವನಾಂಶವಾಗಿ 7 ಲಕ್ಷ ರೂ. ಮತ್ತು ಮಗಳ ಖರ್ಚಿಗಾಗಿ 3 ಲಕ್ಷ ರೂ. ಪ್ರತೀ ತಿಂಗಳು ನೀಡುವಂತೆ ಬೇಡಿಕೆಯಿಟ್ಟಿದ್ದರು. ಇದೀಗ ಕೋರ್ಟ್ ಆದೇಶದ ಬಳಿಕವೂ ಹಸೀನ್ ಜಹಾನ್ ಇದನ್ನೇ ಹೇಳಿದ್ದಾರೆ. ನನ್ನ ಪತಿಯ ಆದಾಯ ಗಮನಿಸಿದರೆ ಇದಕ್ಕಿಂತ ಹೆಚ್ಚಿನ ಮೊತ್ತ ನೀಡುವ ಸಾಮರ್ಥ್ಯ ಅವರಿಗಿದೆ ಎಂದು ಹಸೀನಾ ಪ್ರತಿಪಾದಿಸಿದ್ದಾರೆ.
ಮೊಹಮ್ಮದ್ ಶಮಿಯಿಂದ ದೂರವಾದ ಬಳಿಕವೂ ಹಸೀನ್ ಬೇರೆ ಮದುವೆಯಾಗದೇ ಪುತ್ರಿ ಜೊತೆ ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ಇದನ್ನು ಪರಿಗಣಿಸಿ 4 ಲಕ್ಷ ರೂ. ಜೀವನಾಂಶ ನೀಡುವಂತೆ ಕೋರ್ಟ್ ಆದೇಶ ನೀಡಿತ್ತು.