ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಔಟಾದ ಸಿಟ್ಟಿಗೆ ಟೀಂ ಇಂಡಿಯಾ ಬ್ಯಾಟಿಗ ರಿಷಭ್ ಪಂತ್ ಡ್ರೆಸ್ಸಿಂಗ್ ರೂಂನಲ್ಲಿ ಹೆಲ್ಮೆಟ್ ಎತ್ತಿ ಬಿಸಾಕಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮೊದಲ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಶತಕ ಗಳಿಸಿ ಮಿಂಚಿದ್ದ ರಿಷಭ ನಿನ್ನೆ ಕೂಡಾ ಉತ್ತಮ ಆರಂಭ ಪಡೆದರು. ಆದರೆ 25 ರನ್ ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಲು ಹೋಗಿ ಸ್ಪಿನ್ನರ್ ಶೊಯೇಬ್ ಬಾಶಿರ್ ಗೆ ವಿಕೆಟ್ ಒಪ್ಪಿಸಿದರು. ಇದರಿಂದ ಅವರು ತೀವ್ರ ನಿರಾಸೆಗೊಳಗಾದರು.
ಪೆವಿಲಿಯನ್ ಗೆ ತಲುಪಿದ ಬಳಿಕ ಹೆಚ್ಚು ಕಡಿಮೆ ತಮ್ಮ ಹೆಲ್ಮೆಟ್, ಬ್ಯಾಟ್ ಎತ್ತಿ ಬಿಸಾಕಿ ತಮ್ಮ ಮೇಲಿನ ಸಿಟ್ಟು ಪ್ರದರ್ಶಿಸಿದರು. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿನ್ನೆಯೂ ರಿಷಭ್ ಬ್ಯಾಟಿಂಗ್ ಆರಂಭ ಉತ್ತಮವಾಗಿತ್ತು. ಶುಬ್ಮನ್ ಗಿಲ್ ಜೊತೆ ಮತ್ತೊಂದು ಉತ್ತಮ ಜೊತೆಯಾಟವಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಈಡೇರದೇ ಇದ್ದ ನಿರಾಶೆ ಅವರ ಮುಖದಲ್ಲಿತ್ತು. ಅಂತಿಮವಾಗಿ ನಿನ್ನೆಯ ದಿದನಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತ್ತು.