ಮೊಹಮ್ಮದ್ ಶಮಿಗೆ ಸುಪ್ರೀಂ ನೋಟಿಸ್: ವೃತ್ತಿ ಜೀವನದ ಬಳಿಕ ವೈಯಕ್ತಿಕ ಜೀವನದಲ್ಲೂ ಸಂಕಷ್ಟ

Krishnaveni K
ಶುಕ್ರವಾರ, 7 ನವೆಂಬರ್ 2025 (14:03 IST)
Photo Credit: X
ನವದೆಹಲಿ: ಮೊಹಮ್ಮದ್ ಶಮಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇದರೊಂದಿಗೆ ವೃತ್ತಿ ಜೀವನದ ಬಳಿಕ ವೈಯಕ್ತಿಕ ಜೀವನದಲ್ಲೂ ಸಂಕಷ್ಟ ಎದುರಾಗಿದೆ.

ಟೀಂ ಇಂಡಿಯಾದಲ್ಲಿ ಫಿಟ್ ಆಗಿದ್ದರೂ ಅವಕಾಶ ಸಿಗದೇ ಹತಾಶೆಗೊಳಗಾಗಿರುವ ಮೊಹಮ್ಮದ್ ಶಮಿಗೆ ಮಾಜಿ ಪತ್ನಿ ರೂಪದಲ್ಲಿ ವೈಯಕ್ತಿಕ ಜೀವನದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಪತ್ನಿ ನೀಡಿದ ಅರ್ಜಿ ಮೇರೆಗೆ ಶಮಿಗೆ ಉನ್ನತ ನ್ಯಾಯಾಲಯ ನೋಟಿಸ್ ನೀಡಿದೆ.

ಮೊಹಮ್ಮದ್ ಶಮಿ ಮಾಜಿ ಪತ್ನಿ ಹಸೀನ್ ಜಹಾನ್ ವಿಚ್ಛೇದನದ ಸಂದರ್ಭದಲ್ಲಿ ಹೈಕೋರ್ಟ್ ತಿಂಗಳಿಗೆ 1.5 ಲಕ್ಷ ರೂ. ಮತ್ತು ಮಗಳ ಆರೈಕೆಗೆ 2.5 ಲಕ್ಷ ರೂ. ನೀಡುವಂತೆ ಆದೇಶಿಸಿತ್ತು. ಆದರೆ ಇದು ಸಾಕಾಗಲ್ಲ ಎಂದು ಹಸೀನ್ ಜಹಾನ್ ಈಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ಈ ಸಂಬಂಧ ವಿಚಾರಣೆಗಾಗಿ ಮೊಹಮ್ಮದ್ ಶಮಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ಈ ಬಗ್ಗೆ ನಾಲ್ಕು ವಾರಗಳೊಳಗಾಗಿ ನೋಟಿಸ್ ಗೆ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಶಮಿ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ವಿಚಾರಣೆ ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS: ಟಿ20 ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಭಿಷೇಕ್ ಶರ್ಮಾ

IND vs AUS: ಟಾಸ್ ಗೆದ್ದ ಆಸ್ಟ್ರೇಲಿಯಾ, ಮೊದಲು ಬ್ಯಾಟಿಂಗ್ ಮಾಡ್ತಿರೋದು ಯಾರು

ಒಲಿಂಪಿಕ್ಸ್ ಅವಕಾಶ ಕಳೆದುಕೊಂಡ ಪಾಕಿಸ್ತಾನ: ಯಾವೆಲ್ಲಾ ತಂಡಗಳು ಆಯ್ಕೆ

ಸಾಕಪ್ಪಾ ಸಾಕು.. ಮೀಡಿಯಾ ಕಂಡು ಗೆಳೆಯನ ಜೊತೆ ಎಸ್ಕೇಪ್ ಆದ ಸ್ಮೃತಿ ಮಂಧಾನ

IND vs AUS: ಸರಣಿ ಗೆಲ್ಲಲು ಟೀಂ ಇಂಡಿಯಾಗೆ ಇಂದು ಅದ್ಭುತ ಅವಕಾಶ

ಮುಂದಿನ ಸುದ್ದಿ
Show comments