ಲಕ್ನೋ: ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ಮತ್ತು ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ನಡುವೆ ಮೈದಾನದಲ್ಲಿ ಘರ್ಷಣೆಯಾಗಿದ್ದಕ್ಕೆ ಮೂಲ ಕಾರಣ ಮೊಹಮ್ಮದ್ ಸಿರಾಜ್!
ಲಕ್ನೋ ಬ್ಯಾಟಿಗ ನವೀನ್ ಉಲ್ ಹಕ್ ನಾನ್ ಸ್ಟ್ರೈಕರ್ ನಲ್ಲಿದ್ದಾಗ ಮೊಹಮ್ಮದ್ ಸಿರಾಜ್ ಬೇಕೆಂದೇ ಬಾಲ್ ನ್ನು ವಿಕೆಟ್ ಕಡೆಗೆ ಎಸೆದು ತೀಕ್ಷ್ಣ ನೋಟ ಬೀರಿದ್ದಾರೆ. ಇದರಿಂದ ಘರ್ಷಣೆ ಆರಂಭವಾಗಿದೆ. ಈ ವೇಳೆ ನವೀನ್-ಸಿರಾಜ್ ನಡುವೆ ಮಾತಿನ ಚಕಮಕಿ ನಡೆದಾಗ ಕೊಹ್ಲಿ ಮಧ್ಯಪ್ರವೇಶಿಸಿದ್ದಾರೆ.
ಇದರಿಂದ ಅಸಮಾಧಾನಗೊಂಡಿದ್ದ ನವೀನ್ ಪಂದ್ಯದ ಬಳಿಕ ಕೊಹ್ಲಿಗೆ ಶೇಕ್ ಹ‍್ಯಾಂಡ್ ಮಾಡಲೂ ನಿರಾಕರಿಸಿದ್ದಾರೆ. ಇದರಿಂದಲೇ ಎಲ್ಲಾ ಸಮಸ್ಯೆಗಳೂ ಶುರುವಾಗಿದೆ.