ಮುಂಬೈ: ದುರಾದೃಷ್ಟ ಎಂದರೆ ಇದೇ ನೋಡಿ. ಬಹಳ ದಿನಗಳ ನಂತರ ಟೀಂ ಇಂಡಿಯಾ ಸೀಮಿತ ಓವರ್ ಗಳ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಮೊಹಮ್ಮದ್ ಶಮಿಗೆ ಈಗ ಆಡುವ ಅದೃಷ್ಟ ಇಲ್ಲದಾಗಿದೆ.
ಮೊಹಮ್ಮದ್ ಶಮಿಗೆ ಕೊರೋನಾ ಪಾಸಿಟಿವ್ ಆಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಆಸೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಅವರು ಟಿ20 ವಿಶ್ವಕಪ್ ತಂಡದಲ್ಲಿ ಮೀಸಲು ಆಟಗಾರರಾಗಿದ್ದಾರೆ.
ಶಮಿ ಸ್ಥಾನಕ್ಕೆ ಆಸೀಸ್ ಸರಣಿಗೆ ಉಮೇಶ್ ಯಾದವ್ ಗೆ ಬುಲಾವ್ ನೀಡಲಾಗಿದೆ. ಸದ್ಯಕ್ಕೆ ಶಮಿಗೆ ಸಣ್ಣ ಪ್ರಮಾಣದ ಲಕ್ಷಣಗಳಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುವ ವಿಶ್ವಾಸವಿದೆ.