ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಬಗ್ಗೆ ಮಾಜಿ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಮಹತ್ವ ಮಾಹಿತಿ ಹಂಚಿಕೊಂಡಿದ್ದಾರೆ.
ರಿಷಬ್ ಪಂತ್ ರನ್ನು ವೃದ್ಧಿಮಾನ್ ಸಹಾಗಾಗಿ ಟೆಸ್ಟ್ ತಂಡದಿಂದ ಹೊರಗಿಡಲಾಗುತ್ತಿತ್ತು. ಬಳಿಕ ಅವರ ವಿಕೆಟ್ ಕೀಪಿಂಗ್ ಶೈಲಿ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ನಡುವೆ ಸೀಮಿತ ಓವರ್ ಗಳಲ್ಲೂ ಕೆಎಲ್ ರಾಹುಲ್ ಗಾಗಿ ಅವರನ್ನು ಆಡುವ ಬಳಗದಿಂದ ಹೊರಗಿಡಲಾಯಿತು.
ಆಗ ಪಂತ್ ಗಂಭೀರವಾಗಿ ತಮ್ಮ ವಿಕೆಟ್ ಕೀಪಿಂಗ್ ಕಡೆಗೆ ಗಮನ ಕೊಟ್ಟರು. ಎಷ್ಟೆಂದರೆ ಬ್ಯಾಟಿಂಗ್ ಸೆಷನ್ ವೇಳೆ ಬ್ಯಾಟಿಂಗ್ ಅಭ್ಯಾಸ ಮಾಡುವುದನ್ನು ಬಿಟ್ಟು ಕೀಪಿಂಗ್ ಅಭ್ಯಾಸ ಮಾಡುತ್ತಿದ್ದರು. ಲಾಕ್ ಡೌನ್ ವೇಳೆ ಮನೆಯಲ್ಲಿಯೂ ಕೀಪಿಂಗ್ ಅಭ್ಯಾಸ ಮಾಡಿದ್ದರು. ಆ ಮೂಲಕ ತಮ್ಮ ವಿಕೆಟ್ ಕೀಪಿಂಗ್ ಸುಧಾರಣೆಗೆ ಗಮನ ಕೇಂದ್ರೀಕರಿಸಿದ್ದರು ಎಂದು ಆರ್. ಶ್ರೀಧರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.