ಮುಂಬೈ: ಕರ್ನಾಟಕ ಮೂಲದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇದರ ಹಿಂದೆ ಬೇರೆಯೇ ಪ್ಲ್ಯಾನ್ ಇದೆ ಎನ್ನಲಾಗಿದೆ.
ಇತ್ತೀಚೆಗೆ ಸುರೇಶ್ ರೈನಾ ಕೂಡಾ ಐಪಿಎಲ್ ಗೆ ವಿದಾಯ ಘೋಷಿಸಿದ್ದರು. ಇದೀಗ ವಿದೇಶೀ ಲೀಗ್ ಗಳು ಜನಪ್ರಿಯವಾಗುತ್ತಿದ್ದು ಭಾರತೀಯ ಕ್ರಿಕೆಟಿಗರಿಗೆ ವಿದೇಶೀ ಲೀಗ್ ಗಳಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಒಪ್ಪಿಗೆ ನೀಡುತ್ತಿಲ್ಲ.
ಈ ಕಾರಣಕ್ಕೆ ಅತ್ತ ದೇಶೀಯ ಕ್ರಿಕೆಟ್ ನಲ್ಲೂ ಇಲ್ಲ, ಐಪಿಎಲ್ ನಲ್ಲೂ ಅವಕಾಶ ಸಿಗದ ಆಟಗಾರರು ಭಾರತದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಹೇಳಿ ವಿದೇಶೀ ಲೀಗ್ ನಲ್ಲಿ ಯಾವುದೇ ತಕಾರಾರು ಇಲ್ಲದೇ ಆಡಲು ಯೋಜನೆ ಹೊಂದಿದ್ದರೆ. ಇದೇ ಕಾರಣಕ್ಕೆ ಇತ್ತೀಚೆಗೆ ಸುರೇಶ್ ರೈನಾ ನಿವೃತ್ತಿಯಾಗಿದ್ದಾರೆಂದು ಹೇಳಲಾಗಿತ್ತು. ಈಗ ರಾಬಿನ್ ಉತ್ತಪ್ಪ ಕೂಡಾ ಅದೇ ಹಾದಿಯಲ್ಲಿದ್ದಾರೆ ಎನ್ನಲಾಗಿದೆ. ಒಮ್ಮೆ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದರೆ ವಿದೇಶೀ ಲೀಗ್ ನಲ್ಲಿ ಆಡಲು ಬಿಸಿಸಿಐನ ಯಾವುದೇ ತಕರಾರುಗಳು ಇರುವುದಿಲ್ಲ.