Publish Date: Thu, 15 Sep 2022 (09:40 IST)
Updated Date: Thu, 15 Sep 2022 (09:51 IST)
ಮುಂಬೈ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾಗೆ ಸುಪ್ರೀಂ ಕೋರ್ಟ್ ಗೆ ಸಿಹಿ ಸುದ್ದಿ ಸಿಕ್ಕಿದೆ.
ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಮುಂದುವರಿಯಲು ಅವರಿಗೆ ಬಿಸಿಸಿಐ ಸಂವಿಧಾನ ತೊಡಕಾಗಿತ್ತು. ಹೀಗಾಗಿ ಇದಕ್ಕೆ ತಿದ್ದುಪಡಿ ತರಬೇಕೆಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಇನ್ನೂ ಮೂರು ವರ್ಷ ಬಿಸಿಸಿಐ ಉನ್ನತ ಹುದ್ದೆಯಲ್ಲಿ ಇವರು ಮೂವರು ಮುಂದುವರಿಯಲು ಅವಕಾಶ ಸಿಗಲಿದೆ.