Publish Date: Wed, 14 Sep 2022 (16:52 IST)
Updated Date: Wed, 14 Sep 2022 (16:54 IST)
ಕಾನ್ಪುರ: ರೋಡ್ ಸೇಫ್ಟೀ ಟೂರ್ನಮೆಂಟ್ ನಲ್ಲಿ ಇಂದು ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡುಲ್ಕರ್ ಮತ್ತು ಬ್ರಿಯಾನ್ ಲಾರಾ ನಡುವಿನ ಕಾಳಗ ನೋಡುವ ಭಾಗ್ಯ ವೀಕ್ಷಕರಿಗೆ.
ಇಂದಿನ ಪಂದ್ಯದಲ್ಲಿ ಸಚಿನ್ ನೇತೃತ್ವದ ಭಾರತದ ದಿಗ್ಗಜ ಕ್ರಿಕೆಟಿಗರ ತಂಡ ಮತ್ತು ವೆಸ್ಟ್ ಇಂಡೀಸ್ ದಿಗ್ಗಜರ ತಂಡ ಪರಸ್ಪರ ಸೆಣಸಾಡಲಿದೆ. ಕಾನ್ಪುರದಲ್ಲಿ ಈ ಪಂದ್ಯ ಸಂಜೆ 7.30 ಕ್ಕೆ ಟಿ20 ಮಾದರಿಯಲ್ಲಿ ಪಂದ್ಯ ನಡೆಯಲಿದೆ.
ವಿಶೇಷವೆಂದರೆ ಇಂದಿನ ಪಂದ್ಯದಲ್ಲಿ ಸಚಿನ್ ಜೊತೆಗೆ ವೀರೇಂದ್ರ ಸೆಹ್ವಾಗ್ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಪ್ರೇಕ್ಷಕರಿಗೆ ಇಂದು ಹಬ್ಬವಾಗಲಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ದ.ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿತ್ತು.