Publish Date: Sat, 17 Sep 2022 (08:30 IST)
Updated Date: Sat, 17 Sep 2022 (08:56 IST)
ಮುಂಬೈ: ಐಪಿಎಲ್ ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಂಬರುವ ಸೀಸನ್ ಗೆ ಮುಖ್ಯ ಕೋಚ್ ಆಗಿ ಮಾರ್ಕ್ ಬೌಚರ್ ಅವರನ್ನು ಆಯ್ಕೆ ಮಾಡಿದೆ.
ದ.ಆಫ್ರಿಕಾ ಮೂಲದ ವಿಕೆಟ್ ಕೀಪರ್ ಬ್ಯಾಟಿಗ ಇತ್ತೀಚೆಗಷ್ಟೇ ದ.ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ತಂಡಕ್ಕೆ ಮಹೇಲ ಜಯವರ್ಧನೆ ಮುಖ್ಯ ಕೋಚ್ ಆಗಿದ್ದರು. ಅವರ ಜೊತೆಗೆ ಜಹೀರ್ ಖಾನ್ ಬೌಲಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ.