Publish Date: Sun, 18 Sep 2022 (09:20 IST)
Updated Date: Sun, 18 Sep 2022 (09:23 IST)
ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವಾಡಲು ಟೀಂ ಇಂಡಿಯಾ ಸದಸ್ಯರು ಮೊಹಾಲಿಗೆ ಬಂದಿಳಿದಿದ್ದಾರೆ.
ಸೆಪ್ಟೆಂಬರ್ 20 ರಿಂದ ಟಿ20 ಸರಣಿ ಆರಂಭವಾಗಲಿದೆ. ಇದೀಗ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಕ್ರಿಕೆಟಿಗರ ದಂಡು ಮೊಹಾಲಿಗೆ ಆಗಮಿಸಿದ್ದಾರೆ.
ಎರಡನೇ ಪಂದ್ಯ ನಾಗ್ಪುರದಲ್ಲಿ ಸೆಪ್ಟೆಂಬರ್ 23 ರಂದು ಮತ್ತು ಅಂತಿಮ ಪಂದ್ಯ ಹೈದರಾಬಾದ್ ನಲ್ಲಿ ಸೆಪ್ಟೆಂಬರ್ 25 ರಂದು ನಡೆಯಲಿದೆ.