ಹುಡುಗರ ಹೃದಯ ಕದ್ದ ಚೆಲುವೆ ಕ್ರಿಕೆಟರ್, ಆರ್‌ಸಿಬಿ ಕ್ಯಾಪ್ಟನ್ ಸ್ಮೃತಿ ಮಂಧಾನ ನವೆಂಬರ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.
ವರದಿಯ ಪ್ರಕಾರ, ಸ್ಮೃತಿ ಮಂಧಾನ ನವೆಂಬರ್‌ನಲ್ಲಿ ಸಂಗೀತ ಸಂಯೋಜಕ ಮತ್ತು ನಿರ್ದೇಶಕ ಪಲಾಶ್ ಮುಚ್ಚಲ್ ಅವರನ್ನು ಕೈಹಿಡಿಯಲಿದ್ದಾರೆ.
2025 ರ ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಉಪನಾಯಕಿಯಾಗಿರುವ ಮಂಧಾನ, 2019 ರಲ್ಲಿ ಪಲಾಶ್ ಜೊತೆ ಡೇಟಿಂಗ್ ಪ್ರಾರಂಭಿಸಿದ್ದಾರೆ. ಕಳೆದ ವರ್ಷ ಈ ಜೋಡಿ, ತಮ್ಮ ಪ್ರೀತಿ ವಿಚಾರವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ದೃಢಪಡಿಸಿತು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ ನವೆಂಬರ್ 20ರಂದು ಮದುವೆಯಾಗಲು ನಿರ್ಧರಿಸಿದ್ದಾರೆ.
ನವೆಂಬರ್ 20 ರಂದು ವಿವಾಹ ಮಹೋತ್ಸವಗಳು ಪ್ರಾರಂಭವಾಗಲಿದೆ ಎಂದು ಮೂಲಗಳು ಬಹಿರಂಗಪಡಿಸುತ್ತವೆ. ಮದುವೆಯು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆಯಲಿದೆ, ಇದು ಸ್ಮೃತಿ ಅವರ ತವರೂರು ಆಗಿದೆ.