Select Your Language

Notifications

webdunia
webdunia
webdunia
webdunia

ಮನೀಶ್ ಪಾಂಡೆ ಸಾಹಸ ಟೀಂ ಇಂಡಿಯಾ ಪಾಲಿಗೆ ವರವಾಯ್ತು

ಮನೀಶ್ ಪಾಂಡೆ ಸಾಹಸ ಟೀಂ ಇಂಡಿಯಾ ಪಾಲಿಗೆ ವರವಾಯ್ತು
ಕೊಲೊಂಬೊ , ಮಂಗಳವಾರ, 13 ಮಾರ್ಚ್ 2018 (08:57 IST)
ಕೊಲೊಂಬೊ: ತ್ರಿಕೋನ ಟಿ20 ಸರಣಿಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು. ಭಾರತದ ಪರ ಮಾರಕ ದಾಳಿ ಸಂಘಟಿಸಿದ ಶ್ರಾದ್ದೂಲ್ ಠಾಕೂರ್ 4 ವಿಕೆಟ್ ಕಿತ್ತರು. ವಾಷಿಂಗ್ಟನ್ ಸುಂದರ್ 2 ವಿಕೆಟ್ ಗಳಿಸಿದರು. ಲಂಕಾ ಕುಸಾಲಾ ಮೆಂಡಿಸ್ 55 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 17.3 ಓವರ್ ಗಳಲ್ಲಿ 153 ರನ್ ಗಳಿಸಿತು. ಉತ್ತಮ ಫಾರ್ಮ್ ನಲ್ಲಿದ್ದ ಶಿಖರ್ ಧವನ್ ಬೇಗನೇ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ ಎಂದಿನಂತೇ ಬೇಗನೇ ಪೆವಿಲಿಯನ್ ಸೇರಿಕೊಂಡರು.

ಈ ಸಂದರ್ಭದಲ್ಲಿ ಹಿರಿಯ ಸುರೇಶ್ ರೈನಾ 15 ಎಸೆತಗಳಲ್ಲಿ 27 ರನ್ ಸಿಡಿಸಿ ಔಟಾದರು. ನಂತರ ಕ್ರೀಸ್ ಗೆ ಬಂದ ಮನೀಶ್ ಪಾಂಡೆ (42) ಮತ್ತು ದಿನೇಶ್ ಕಾರ್ತಿಕ್ (39) ಅಜೇಯವಾಗುಳಿದು ತಂಡವನ್ನು ಗೆಲುವಿನ ದರ ಮುಟ್ಟಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶವಪೆಟ್ಟಿಗೆಗೆ ಹೆಗಲು ನೀಡುವುದರ ಮೂಲಕ ಅಗಲಿದ ಗೆಳಯನಿಗೆ ಗೌರವ ಸಲ್ಲಿಸಿದ ಲೀ ಯಾಂಗ್ ಡೀ