Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದಲ್ಲಿ ಅವಕಾಶಕ್ಕಾಗಿ ಕಾಯುವ ಪರಿಸ್ಥಿತಿಗೆ ಮನೀಶ್ ಪಾಂಡೆಗೆ ಬೇಸರ

ಟೀಂ ಇಂಡಿಯಾದಲ್ಲಿ ಅವಕಾಶಕ್ಕಾಗಿ ಕಾಯುವ ಪರಿಸ್ಥಿತಿಗೆ ಮನೀಶ್ ಪಾಂಡೆಗೆ ಬೇಸರ
ಸೆಂಚೂರಿಯನ್ , ಶುಕ್ರವಾರ, 23 ಫೆಬ್ರವರಿ 2018 (08:21 IST)
ಸೆಂಚೂರಿಯನ್: ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಪ್ರತಿಭಾವಂತರ ಗುಂಪೇ ಇದೆ. ಪ್ರತಿಭೆಯಿದ್ದೂ ಅವಕಾಶ ಸಿಗುವುದು ಅಷ್ಟು ಸುಲಭವಿಲ್ಲ. ಈ ಪರಿಸ್ಥಿತಿ ಬಗ್ಗೆ ಕನ್ನಡಿಗ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಬೇಸರ ವ್ಯಕ್ತಪಡಿಸಿದ್ದಾರೆ.
 

ವಿಶೇಷವಾಗಿ ಈ ಸರಣಿಯಲ್ಲಿ ಅವಕಾಶಕ್ಕಾಗಿ ತುಂಬಾ ಕಾಯಬೇಕಾಯಿತು. ಅದರಲ್ಲಿ ಅಚ್ಚರಿಯೇನೂ ಇಲ್ಲ. ಭಾರತ ತಂಡಕ್ಕಾಗಿ ಆಡಲು ಸಾಕಷ್ಟು ಪ್ರತಿಭಾವಂತರ ಗುಂಪೇ ಕಾಯುತ್ತಿದೆ. ಹೀಗಾಗಿ ಈ ತಂಡಕ್ಕೆ ಆಡಲು ಅವಕಾಶ ಸಿಗುವುದು ಸುಲಭದ ಕೆಲಸವಲ್ಲ.

ಅದರಲ್ಲೂ ನಾನು 4 ಅಥವಾ 5ನೇ ಕ್ರಮಾಂಕದಲ್ಲಿ ಆಡುತ್ತೇನೆ. ಟೀಂ ಇಂಡಿಯಾ ಅಗ್ರ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶಿಖರ್ ಧವನ್ ರಂತಹ ಆಟಗಾರರು ಬಹುಭಾಗ ಆಟ ಮುಗಿಸಿರುತ್ತಾರೆ. ಹೀಗಾಗಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಅವಕಾಶ ಸಿಗುವುದೇ ಕಡಿಮೆ. ಹಾಗಿದ್ದರೂ ನಾನು ಆಡುವ ಸ್ಥಾನದಲ್ಲಿ ಹಿಂದೆ ಯುವರಾಜ್, ಸುರೇಶ್ ರೈನಾರಂತಹ ಹಿರಿಯ ಆಟಗಾರರು ಆಡಿದ ಕ್ರಮಾಂಕ. ಅವರ ಸ್ಥಾನವನ್ನು ತುಂಬುವುದು ಸುಲಭದ ಕೆಲಸವಲ್ಲ ಎಂದು ಮನೀಶ್ ಪಂದ್ಯದ ನಂತರ ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಕೊಹ್ಲಿ ಅಪ್ಪುಗೆಯ ಫೋಟೋ ನೋಡಿ ಕರಗಿದ ಅನುಷ್ಕಾ ಶರ್ಮಾ ಹೇಳಿದ್ದೇನು ಗೊತ್ತಾ?!