Select Your Language

Notifications

webdunia
webdunia
webdunia
webdunia

ಮನೀಶ್ ಪಾಂಡೆ ಮೇಲೆ ಮೈದಾನದಲ್ಲೇ ಕೂಗಾಡಿದ ಧೋನಿ!

ಮನೀಶ್ ಪಾಂಡೆ ಮೇಲೆ ಮೈದಾನದಲ್ಲೇ ಕೂಗಾಡಿದ ಧೋನಿ!
ಸೆಂಚೂರಿಯನ್ , ಗುರುವಾರ, 22 ಫೆಬ್ರವರಿ 2018 (09:27 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತಕ್ಕೆ ಬ್ಯಾಟಿಂಗ್ ಮೂಲಕ ಆಧಾರವಾದ ಧೋನಿ, ಮನೀಶ್ ಪಾಂಡೆ ಮೇಲೆ ಕೂಗಾಡಿದ ಪ್ರಸಂಗ ನಡೆದಿದೆ.
 

ಪಾಂಡೆ ಮತ್ತು ಧೋನಿ ಭಾರತಕ್ಕೆ ಉತ್ತಮ ಜತೆಯಾಟದ ಮೂಲಕ ನೆರವಾದರು. ಈ ಸಂದರ್ಭದಲ್ಲಿ ಧೋನಿ ಬ್ಯಾಟಿಂಗ್ ಗೆ ರೆಡಿಯಾಗುತ್ತಿದ್ದಾಗ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಮನೀಶ್ ಎತ್ತಲೋ ನೋಡುತ್ತಿದ್ದುದು ಧೋನಿ ಕೆರಳಿಸಿತು.

‘ಓಯ್… ನಿಂಗೇ ಹೇಳಿದ್ದಲ್ವಾ? ಅಲ್ಲೆಲ್ಲಾ ಏನು ನೋಡ್ತಾ ಇದ್ದೀಯಾ ಈ ಕಡೆಗೆ ನೋಡು’ ಎಂದು ಹಿಂದಿಯಲ್ಲಿ ಸಿಟ್ಟಿನಿಂದ ಹೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಮೈದಾನದಲ್ಲಿ ತಮ್ಮ ಭಾವನೆ ವ್ಯಕ್ತಪಡಿಸದ ಧೋನಿ ಅಪರೂಪಕ್ಕೆ ಹೀಗೆ ವ್ಯಗ್ರರಾಗಿದ್ದು ಚರ್ಚೆಗೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಕೈ ತಪ್ಪಿದ ದಾಖಲೆ