Publish Date: Tue, 20 Feb 2018 (08:43 IST)
Updated Date: Tue, 20 Feb 2018 (08:45 IST)
ವಾಂಡರರ್ಸ್: ಏಕದಿನ ಸರಣಿ ಗೆದ್ದ ಬೆನ್ನಲ್ಲೇ ಮೊದಲ ಟಿ20 ಪಂದ್ಯವನ್ನೂ ಗೆದ್ದ ಟೀಂ ಇಂಡಿಯಾ ಕ್ರಿಕೆಟಿಗರು ಭರ್ಜರಿ ಪಾರ್ಟಿ ಮೂಡ್ ನಲ್ಲಿದ್ದಾರೆ.
ವಿರಾಟ್ ಕೊಹ್ಲಿ, ಧೋನಿ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್, ಸುರೇಶ್ ರೈನಾ ಸೇರಿದಂತೆ ಕ್ರಿಕೆಟಿಗರ ದಂಡು ಪಂಚತಾರಾ ಹೋಟೆಲ್ ನಲ್ಲಿ ಭರ್ಜರಿ ಪಾರ್ಟಿ ಮಾಡಿದೆ.
ಈ ಖುಷಿಯ ಕ್ಷಣಗಳನ್ನು ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಈ ಸರಣಿಯ ಮೂಲಕ ಎಷ್ಟೋ ದಿನಗಳ ನಂತರ ಟೀಂ ಇಂಡಿಯಾಗೆ ಬಂದ ಸುರೇಶ್ ರೈನಾ ಕೂಡಾ ಈ ಪಾರ್ಟಿ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ