Select Your Language

Notifications

webdunia
webdunia
webdunia
webdunia

ಕೂದಲೆಳೆಯಲ್ಲೇ ಕೊಹ್ಲಿ ಕೈ ತಪ್ಪಿದ ದಾಖಲೆ, ಭುವನೇಶ್ವರ್ ಕುಮಾರ್ ಕೈ ಬಿಡಲಿಲ್ಲ!

ಕೂದಲೆಳೆಯಲ್ಲೇ ಕೊಹ್ಲಿ ಕೈ ತಪ್ಪಿದ ದಾಖಲೆ, ಭುವನೇಶ್ವರ್ ಕುಮಾರ್ ಕೈ  ಬಿಡಲಿಲ್ಲ!
ವಾಂಡರರ್ಸ್ , ಸೋಮವಾರ, 19 ಫೆಬ್ರವರಿ 2018 (09:40 IST)
ವಾಂಡರರ್ಸ್: ಭಾರತ ಮತ್ತು ದ.ಆಫ್ರಿಕಾ ನಡುವೆ ಮೊದಲ ಟಿ20 ಪಂದ್ಯದಲ್ಲಿ ಮತ್ತೊಮ್ಮೆ ವಿರಾಟ್ ಕೊಹ್ಲಿ ಆರ್ಭಟ ಮೆರೆಯಬಹುದು ಎಂದು ಕಾದಿದ್ದವರಿಗೆ ನಿರಾಶೆ ಕಾದಿತ್ತು. ಕೊಹ್ಲಿ ಬದಲಿಗೆ ಶಿಖರ್ ಧವನ್ ಸಿಡಿದರು.
 

ಆದರೆ ಕೊಹ್ಲಿ ಕೂದಲೆಳೆಲ್ಲೇ ದಾಖಲೆಯೊಂದನ್ನು ಮಿಸ್ ಮಾಡಿಕೊಂಡರು. ಟಿ20 ಪಂದ್ಯಗಳಲ್ಲಿ 2000 ರನ್ ಮೈಲಿಗಲ್ಲು ದಾಟುವ ಅವಕಾಶ ಅವರ ಎದುರಿಗಿತ್ತು. ಇದಕ್ಕೆ ಅವರು 38 ರನ್ ಗಳಿಸಬೇಕಿತ್ತು. ಆದರೆ ದುರದೃಷ್ಟವಶಾತ್ 26 ಕ್ಕೆ ಔಟಾದರು. ಹೀಗಾಗಿ ಆ ದಾಖಲೆಯನ್ನು ಇಂದು ಅವರಿಂದ ಮಾಡಲು ಸಾಧ್ಯವಾಗಲಿಲ್ಲ. ಈಗ ಕೊಹ್ಲಿಯ ಟಿ20 ಪಂದ್ಯಗಳ ಮೊತ್ತ 1982 ಇದೆ. ಇನ್ನು 18 ರನ್ ಗಳಿಸಿದರೆ ಈ ಮೈಲಿಗಲ್ಲು ಸಾಧಿಸಬಹುದು. ಅದಕ್ಕೆ ಅವರು ಮುಂದಿನ ಪಂದ್ಯದವರೆಗೆ ಕಾಯಬೇಕು.

ಆದರೆ ಭುವನೇಶ್ವರ್ ಕುಮಾರ್ ಈ ಪಂದ್ಯದಲ್ಲಿ ಭರ್ಜರಿ ದಾಖಲೆ ಮಾಡಿದರು. 5 ವಿಕೆಟ್ ಕಿತ್ತ ಅವರು ಟಿ 20 ಪಂದ್ಯಗಳಲ್ಲಿ 5 ವಿಕೆಟ್ ಕಿತ್ತ ಎರಡನೇ ಭಾರತೀಯ ಬೌಲರ್ ಎಂಬ ದಾಖಲೆ ಮಾಡಿದರು. ಇದಕ್ಕೂ ಮೊದಲು ಯಜುವೇಂದ್ರ ಚಾಹಲ್ ಈ ದಾಖಲೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯ ಎಂಬ ಕ್ರಿಕೆಟ್ ನ ಎಲ್ಲಾ ಮಾದರಿಗಳಲ್ಲಿ 5 ವಿಕೆಟ್ ಕಿತ್ತ ದಾಖಲೆ ಮಾಡಿದರು. ದ.ಆಫ್ರಿಕಾ ವಿರುದ್ಧ ಅತ್ಯುತ್ತಮ ಬೌಲಿಂಗ್ ದಾಖಲೆ ಮಾಡಿದ ವಿಶ್ವದ ಬೌಲರ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಂದ್ಯದ ನಡುವೆ ಪೆವಿಲಿಯನ್ ಮರಳಿ ಶಾಕ್ ಕೊಟ್ಟ ವಿರಾಟ್ ಕೊಹ್ಲಿ!