IND vs ENG: ಭಾರತ ವರ್ಸಸ್ ಇಂಗ್ಲೆಂಡ್ ಟೆಸ್ಟ್, ಲಾರ್ಡ್ ಪಿಚ್ ರಿಪೋರ್ಟ್, ಟೀಂ ಇಂಡಿಯಾ

Krishnaveni K
ಬುಧವಾರ, 9 ಜುಲೈ 2025 (10:11 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಳೆಯಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮೊದಲ ಎರಡೂ ಪಂದ್ಯಗಳಲ್ಲಿ ಭಾರತೀಯರ ಆಟ ನೋಡಿ ಮೂರನೇ ಪಂದ್ಯಕ್ಕೆ ಇಂಗ್ಲೆಂಡ್ ಹೊಸ ರಣತಂತ್ರ ಹೆಣೆದಿದೆ.

ಮೊದಲ ಪಂದ್ಯವನ್ನು ಟೀಂ ಇಂಡಿಯಾ ಸೋತು ಎರಡನೇ ಪಂದ್ಯವನ್ನು ಗೆದ್ದುಕೊಂಡಿತ್ತು. ಹಾಗಿದ್ದರೂ ಎರಡೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಬ್ಯಾಟಿಗರಿಗೆ ಇಂಗ್ಲೆಂಡ್ ಬೌಲರ್ ಗಳು ದೊಡ್ಡ ಸವಾಲಾಗಲೇ ಇಲ್ಲ. ಹಾಗೆ ನೋಡಿದರೆ ಟೀಂ ಇಂಡಿಯಾ ಬೌಲರ್ ಗಳಷ್ಟೂ ಇಂಗ್ಲೆಂಡ್ ಬೌಲರ್ ಗಳಿಗೆ ಸಕ್ಸಸ್ ಸಿಗಲಿಲ್ಲ.

ಟೀಂ ಇಂಡಿಯಾ ಯುವ ಪಡೆಯನ್ನು ವೇಗದ ಪಿಚ್ ಮೂಲಕ ಬೆದರಿಸಲು ತಂತ್ರ ಮಾಡಿದ್ದ ಇಂಗ್ಲೆಂಡ್ ಗೆ ತಿರುಗುಬಾಣವಾಗಿತ್ತು. ಹೀಗಾಗಿ ಮೂರನೇ ಪಂದ್ಯದಲ್ಲಿ ಪಿಚ್ ನಲ್ಲಿ ಸ್ವಲ್ಪ ಜೀವಂತಿಕೆಯಿರಬೇಕು ಎಂದು ಇಂಗ್ಲೆಂಡ್ ಕೋಚ್ ಕ್ಯುರೇಟರ್ ಗಳಿಗೆ ತಾಕೀತು ಮಾಡಿದ್ದಾರಂತೆ.

ಹೀಗಾಗಿ ಮೊದಲ ಎರಡು ಪಂದ್ಯಗಳಲ್ಲಿ ಇದ್ದಷ್ಟು ಬ್ಯಾಟಿಂಗ್ ಗೆ ಸಹಕಾರ ಸಿಗದು ಎನ್ನಲಾಗುತ್ತಿದೆ. ಮೂರನೇ ಪಂದ್ಯಕ್ಕೆ ಹಸಿರು ಪಿಚ್ ತಯಾರಿಸಲಾಗಿದ್ದು, ನೀರು ಹಾಯಿಸಿ ವೇಗಿಗಳಿಗೆ ನೆರವಾಗುವಂತೆ ಮಾಡಲಾಗಿದೆ ಎನ್ನಲಾಗಿದೆ. ಇಂಗ್ಲೆಂಡ್ ತಂಡಕ್ಕೆ ವೇಗಿ ಜೋಫ್ರಾ ಆರ್ಚರ್ ಕಮ್ ಬ್ಯಾಕ್ ಮಾಡುತ್ತಿರುವುದು ಪ್ಲಸ್ ಪಾಯಿಂಟ್ ಆದರೆ ಇತ್ತ ಟೀಂ ಇಂಡಿಯಾಗೂ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಕಮ್ ಬ್ಯಾಕ್ ಮಾಡಲಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಹೆಚ್ಚು ಪೈಪೋಟಿ ನಿರೀಕ್ಷಿಸಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಕೆಎಲ್ ರಾಹುಲ್ ಭರ್ಜರಿ ಶತಕ: ಬೃಹತ್ ಮೊತ್ತ ಪೇರಿಸಿ ಡೆಲ್ಲಿ

ಅಭ್ಯಾಸದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ ಗಂಭೀರ ಗಾಯ: ಮೈದಾನಕ್ಕೇ ಬಂದ ಆಂಬ್ಯುಲೆನ್ಸ್

IPL 2026: ತನ್ನ ಪಾಡಿಗೆ ನಿಂತಿದ್ದ ವಿರಾಟ್ ಕೊಹ್ಲಿಯನ್ನು ಹಿಂದಿನಿಂದ ಬಂದು ತಬ್ಬಿಕೊಂಡ ಮೊಹಮ್ಮದ್ ಸಿರಾಜ್ Video

IPL 2026: ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದ ಆರ್ ಸಿಬಿ ಮಾಡಿದ ದಾಖಲೆಗಳ ಪಟ್ಟಿ ಇಲ್ಲಿದೆ

IPL 2026: ಗುಜರಾತ್ ಟೈಟನ್ಸ್ ವಿರುದ್ಧ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮುಂದಿನ ಸುದ್ದಿ
Show comments