Select Your Language

Notifications

webdunia
webdunia
webdunia
webdunia

ಎಷ್ಟು ಸಲ ಹೇಳ್ಬೇಕು ಕನ್ನಡ್ ಅಲ್ಲ: ಕೆಎಲ್ ರಾಹುಲ್ ವರ್ತನೆಗೆ ಕನ್ನಡಿಗರು ಫಿದಾ

KL Rahul

Krishnaveni K

ಬೆಂಗಳೂರು , ಶನಿವಾರ, 24 ಫೆಬ್ರವರಿ 2024 (15:44 IST)
Photo Courtesy: Twitter
ಬೆಂಗಳೂರು: ಅಪ್ಪಟ ಕನ್ನಡ ನಾಡಿನ ಕ್ರಿಕೆಟಿಗ ಕೆಎಲ್ ರಾಹುಲ್ ಕುರಿತಾದ ವಿಡಿಯೋವೊಂದು ಈಗ ಕನ್ನಡಿಗರ ಮನಸ್ಸು ಗೆದ್ದಿದೆ. ಜೊತೆಗೆ ನಮ್ಮ ಕನ್ನಡಿಗ ಎಂದು ಹೆಮ್ಮೆಯಿಂದ ಹೇಳುವಂತೆ ಮಾಡಿದೆ.

ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ಕೆಎಲ್ ರಾಹುಲ್ ಬ್ರೇಕ್ ನ ಸಮಯದಲ್ಲಿ ಇತರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಐಪಿಎಲ್ ಗಾಗಿ ಜಾಹೀರಾತೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆದರೆ ಅಲ್ಲಿ ಅವರ ವರ್ತನೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜಾಹೀರಾತು ಚಿತ್ರೀಕರಣಕ್ಕಾಗಿ ರಾಹುಲ್ ಮೇಕಪ್ ಮಾಡಿಕೊಂಡು ಸ್ಕ್ರಿಪ್ಟ್ ಓದಿಕೊಂಡು ಕೂತಿದ್ದಾರೆ. ಸ್ಕ್ರಿಪ್ಟ್ ನಲ್ಲಿರುವ ಡೈಲಾಗ್ ಗಳನ್ನು ಕಂಠಪಾಠ ಮಾಡುತ್ತಿದ್ದರು. ಈ ವೇಳೆ ಅವರ ಪಕ್ಕದಲ್ಲಿದ್ದ ಸಹಾಯಕ ನಿರ್ದೇಶಕ ಅವರಿಗೆ ಸ್ಕ್ರಿಪ್ಟ್ ಓದಲು ಸಹಾಯ ಮಾಡುತ್ತಿದ್ದ. ಈ ವೇಳೆ ಅವರಿಗೆ ಸಹಾಯಕ ನಿರ್ದೇಶಕ ಕನ್ನಡ್ ಎಂದಿದ್ದಾನೆ. ಇದನ್ನು ಕೇಳಿಸಿಕೊಂಡು ರಾಹುಲ್, ಅದು ಕನ್ನಡ್ ಅಲ್ಲ, ಕನ್ನಡ. ಎಷ್ಟು ಸಲ ಹೇಳಬೇಕು ನಿಮಗೆ ಎಂದು ಪ್ರಶ್ನೆ ಮಾಡಿದ್ದಾರೆ.

ರಾಹುಲ್ ಈ ರೀತಿ ಹಿಂದಿ ಭಾಷಿಕರು ತಪ್ಪಾಗಿ ಕನ್ನಡ ಶಬ್ಧವನ್ನು ಬಳಕೆ ಮಾಡಿದ್ದನ್ನು ಸರಿಪಡಿಸಿದ್ದು ನೋಡಿ ಕನ್ನಡಿಗರ ಹೃದಯ ಸೋತು ಹೋಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಮೇಲೆ ಅನೇಕರಿಗೆ ಕನ್ನಡ ಮರೆತೇ ಹೋಗುತ್ತದೆ. ಆದರೆ ರಾಹುಲ್ ಈಗಲೂ ತಮ್ಮ ಕನ್ನಡ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ನೀವು ನಿಜವಾದ ಕನ್ನಡಿಗ ಎಂದು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಕ್ರಿಕೆಟಿಗ ಹೊಯ್ಸಳಗೆ ಇದ್ದಕ್ಕಿದ್ದಂತೆ ಸಾಯುವಂತದ್ದು ಏನಾಗಿತ್ತು