Select Your Language

Notifications

webdunia
webdunia
webdunia
webdunia

IND vs ENG: ಚೊಚ್ಚಲ ಪಂದ್ಯದಲ್ಲಿಯೇ ಅಬ್ಬರಿಸಿದ ಆಕಾಶ್ ದೀಪ್

Akash Deep

Krishnaveni K

ರಾಂಚಿ , ಶುಕ್ರವಾರ, 23 ಫೆಬ್ರವರಿ 2024 (10:56 IST)
Photo Courtesy: Twitter
ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿರುವ ವೇಗಿ ಆಕಾಶ್ ದೀಪ್ ಉತ್ತಮ ಆರಂಭ ಪಡೆದಿದ್ದಾರೆ.

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಇಂಗ್ಲೆಂಡ್ ನ ಬೇಝ್ ಬಾಲ್ ಪ್ಲ್ಯಾನ್ ಗೆ ಚೊಚ್ಚಲ ಪಂದ್ಯವಾಡುತ್ತಿರುವ ವೇಗಿ ಆಕಾಶ್ ದೀಪ್ ಬ್ರೇಕ್ ಹಾಕಿದ್ದಾರೆ. ಆರಂಭದಲ್ಲೇ ಪ್ರಮುಖ ಮೂರು ವಿಕೆಟ್ ಕಬಳಿಸಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು 71 ರನ್ ಗಳಿಸಿದೆ. ಈ ಮೂರೂ ವಿಕೆಟ್ ಆಕಾಶ್ ಪಾಲಾಗಿದೆ.

ಇಂಗ್ಲೆಂಡ್ 47 ರನ್ ಗಳಿಸಿದ್ದಾಗ ಕಳೆದ ಪಂದ್ಯದ ಶತಕವೀರ ಬೆನ್ ಡಕೆಟ್ ರನ್ನು 11 ರನ್ ಗೆ ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡುವಂತೆ ಮಾಡಿದ ಆಕಾಶ್ ದೀಪ್ ಚೊಚ್ಚಲ ವಿಕೆಟ್ ಪಡೆದು ಸಂಭ್ರಮಿಸಿದರು. ಬಳಿಕ ಮರುಕ್ಷಣವೇ ಮತ್ತೊಬ್ಬ ಇನ್ ಫಾರ್ಮ್ ಬ್ಯಾಟಿಗ ಒಲಿ ಪಾಪ್ ರನ್ನು ಎಲ್ ಬಿಡಬ್ಲ್ಯು ಬಲೆಗೆ ಬೀಳಿಸಿದರು.  ತಂಡ 57 ರನ್ ಗಳಿಸಿದ್ದಾಗ ಸೆಟ್ ಆಗಿದ್ದ ಜ್ಯಾಕ್ ಕ್ರಾವ್ಲೇ ರನ್ನು ಬೌಲ್ಡ್ ಔಟ್ ಮಾಡಿದರು.

ಇತ್ತೀಚೆಗೆ ನಡೆದಿದ್ದ ರಣಜಿ ಟ್ರೋಫಿಯಲ್ಲೂ ಆಕಾಶ್ ದೀಪ್ ಅತ್ಯುತ್ತಮ ಬೌಲಿಂಗ್ ನಡೆಸಿ ಫಾರ್ಮ್ ನಲ್ಲಿದ್ದರು. ಇದೇ ಕಾರಣಕ್ಕೆ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಈಗ ಅದೇ ಫಾರ್ಮ್ ನ್ನು ಇಲ್ಲೂ ಮುಂದುವರಿಸಿದ್ದಾರೆ.

ಇಂಗ್ಲೆಂಡ್ ಪರ ಇತ್ತೀಚೆಗಿನ ವರದಿ ಬಂದಾಗ ಅನುಭವಿ ಜೋ ರೂಟ್ 5 ಮತ್ತು ಜಾನಿ ಬೇರ್ ಸ್ಟೋ 11 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾದ ಕಾರಣ ಇಂಗ್ಲೆಂಡ್ ಎಂದಿನ ಬೀಡು ಬೀಸಾದ ಬ್ಯಾಟಿಂಗ್ ಕೈಬಿಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ಟೀಂ ಇಂಡಿಯಾ ಪರ ಡೆಬ್ಯೂಟ್ ಮಾಡಿರುವ ಆಕಾಶ್ ದೀಪ್ ಹಿನ್ನಲೆ