Publish Date: Sat, 24 Feb 2018 (08:22 IST)
Updated Date: Sat, 24 Feb 2018 (08:25 IST)
ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ಮೂರನೇ ಮತ್ತು ನಿರ್ಣಾಯಕ ಟಿ20 ಪಂದ್ಯ ನಡೆಯಲಿದೆ. ಅಂತೂ ಭಾರತದ ಸುದೀರ್ಘ ಆಫ್ರಿಕಾ ಪ್ರವಾಸಕ್ಕೆ ಇಂದು ತೆರೆ ಬೀಳಲಿದೆ.
ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ, ಧೋನಿ ಸಿಡಿಯುವುದರೊಂದಿಗೆ ಕೆಳ ಕ್ರಮಾಂಕದ ಬ್ಯಾಟಿಂಗ್ ಹಳಿಗೆ ಬಂದಂತಾಗಿದೆ. ಆದರೆ ಆರಂಭಿರದ್ದೇ ಚಿಂತೆ. ಇದುವರೆಗೆ ಆರಂಭ ಉತ್ತಮವಾಗಿರಲೇ ಇಲ್ಲ.
ರೋಹಿತ್ ಶರ್ಮಾ ಒಂದು ಪಂದ್ಯದಲ್ಲಿ ಶತಕ ಬಿಟ್ಟರೆ ಇನ್ಯಾವ ಪಂದ್ಯದಲ್ಲೂ ಚೆನ್ನಾಗಿ ಆಡಿಲ್ಲ. ಹೀಗಾಗಿ ನಿರ್ಣಾಯಕ ಪಂದ್ಯಕ್ಕಾದರೂ ಕನ್ನಡಿಗ ಕೆಎಲ್ ರಾಹುಲ್ ಗೆ ಕೊಹ್ಲಿ ಅವಕಾಶ ನೀಡುತ್ತಾರಾ? ಅಥವಾ ಕೊನೆ ಪಂದ್ಯವೆಂದು ತಂಡದಲ್ಲಿ ಯಾವುದೇ ಬದಲಾವಣೆ ಮಾಡೋದಿಲ್ವಾ? ಕಾದು ನೋಡಬೇಕು.
ಬೌಲಿಂಗ್ ನಲ್ಲೂ ಕಳೆದ ಪಂದ್ಯದಲ್ಲಿ ಬದಲಾವಣೆ ಮಾಡಿ ಕೈ ಸುಟ್ಟುಕೊಂಡಿದ್ದ ಕೊಹ್ಲಿ ಈ ಪಂದ್ಯಕ್ಕೆ ಕುಲದೀಪ್ ಯಾದವ್ ಮತ್ತು ಬುಮ್ರಾರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು. ಈ ಅಘೋಷಿತ ಫೈನಲ್ ಪಂದ್ಯ ಆರಂಭವಾಗುವುದು ರಾತ್ರಿ 9.30 ರಿಂದ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ