Publish Date: Fri, 23 Feb 2018 (09:33 IST)
Updated Date: Fri, 23 Feb 2018 (09:35 IST)
ಸೆಂಚೂರಿಯನ್: ದ.ಆಫ್ರಿಕಾಗೆ ಕಾಲಿಟ್ಟಾಗಿನಿಂದ ಯಾಕೋ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ನಸೀಬೇ ಸರಿ ಇಲ್ಲ. ಒಂದು ಶತಕ ಬಿಟ್ಟರೆ ಶೂನ್ಯಕ್ಕೆ ಔಟಾಗಿದ್ದೇ ಹೆಚ್ಚು. ಇದೀಗ ಗೋಲ್ಡನ್ ಡಕ್ ರೋಹಿತ್ ವೀಕ್ಷಕರಿಂದ ಲೇವಡಿಗೊಳಗಾಗಿದ್ದಾರೆ.
ದ್ವಿತೀಯ ಟಿ20 ಪಂದ್ಯದಲ್ಲಿ ಮೊದಲ ಎಸೆತಕ್ಕೇ ಶೂನ್ಯಕ್ಕೆ ಔಟಾಗಿ ರೋಹಿತ್ ಶರ್ಮಾ ಬೇಡದ ದಾಖಲೆಯೊಂದನ್ನು ಮಾಡಿದ್ದರು. ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಶಿಷ್ ನೆಹ್ರಾ ಮತ್ತು ಯೂಸಫ್ ಪಠಾಣ್ 3 ಬಾರಿ ಔಟಾಗಿದ್ದೇ ದಾಖಲೆಯಾಗಿತ್ತು. ಅದೀಗ ರೋಹಿತ್ ಹೆಸರಿಗೆ ಬಂದಿದೆ.
ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ಟೀಕೆ ವ್ಯಕ್ತವಾಗಿದೆ. ರೋಹಿತ್ ಈ ಸರಣಿಯಿಂದ ಸಂಪಾದಿಸಿದ ದೊಡ್ಡ ಬಂಗಾರದ ಪದಕ ಎಂದರೆ ಗೋಲ್ಡನ್ ಡಕ್ ಎಂದು ಒಬ್ಬರು ಅಣಕಿಸಿದರೆ ಇನ್ನೊಬ್ಬರು ಹಾರ್ದಿಕ್ ಪಾಂಡ್ಯರ ಫೇವರಿಟ್ ಕಾರ್ಟೂನ್ ಡಕ್ –ಟೇಲ್ಸ್, ಬೈ ರೋಹಿತ್ ಶರ್ಮಾ ಎಂದು ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ