Publish Date: Sun, 07 Aug 2022 (09:10 IST)
Updated Date: Sun, 07 Aug 2022 (09:43 IST)
ಬೆಂಗಳೂರು: ಶಸ್ತ್ರಚಿಕಿತ್ಸೆ ಬಳಿಕ ಫಿಟ್ನೆಸ್ ಮರಳಿ ಪಡೆಯುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಂಡಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ಫಿಟ್ ಆಗದ ಕಾರಣ ಮತ್ತು ಕೊವಿಡ್ ನಿಂದ ಚೇತರಿಸಿಕೊಳ್ಳದ ಕಾರಣ ರಾಹುಲ್ ರನ್ನು ಜಿಂಬಾಬ್ವೆ ಸರಣಿಗೆ ತಂಡದಿಂದ ಹೊರಗಿಡಲಾಗಿತ್ತು.
ಆದರೆ ಅವರೀಗ ಚೇತರಿಸಿಕೊಳ್ಳುತ್ತಿದ್ದು ಸದ್ಯದಲ್ಲೇ ಫಿಟ್ನೆಸ್ ಸಾಬೀತುಪಡಿಸಿ ಏಷ್ಯಾ ಕಪ್ ವೇಳೆಗೆ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಟಿ20 ಫಾರ್ಮ್ಯಾಟ್ ನಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಗೆ ರಾಹುಲ್ ರಂತಹ ಸ್ಪೆಷಲಿಸ್ಟ್ ಆಟಗಾರರ ಉಪಸ್ಥಿತಿ ಮುಖ್ಯವಾಗಲಿದೆ.